Belagavi

ಮೋಜು-ಮಸ್ತಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಎಮ್.ಓ.ಬಿ ಅಪರಾಧಿ ಸಂಜ್ಯಾ ಅರೆಸ್ಟ್: 8 ದ್ವಿಚಕ್ರ ವಾಹನಗಳ ವಶ

Share

* ಕುಖ್ಯಾತ ಬೈಕ್ ಕಳ್ಳ ಪೊಲೀಸರ ಬಲೆಗೆ.
* ವಿವಿಧ ಜಿಲ್ಲೆಗಳಲ್ಲಿ ಸಂಜ್ಯಾ ಕೈಚಳಕ.
* ಎಂಟು ಬೈಕ್‌ಗಳನ್ನು ವಶಪಡಿಸಿಕೊಂಡ ಖಾಕಿ.
* ಮೋಜು-ಮಸ್ತಿಗಾಗಿ ಸರಣಿ ಕಳ್ಳತನ.

ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಹಳೆ ಕುಖ್ಯಾತ ಅಪರಾಧಿಯನ್ನು (MOB) ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕಾರ್ಯಾಚರಣೆಯ ಮೂಲಕ ಕಳ್ಳರ ಜಾಲಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಬೆನಕನಹೊಳಿ ಗ್ರಾಮದ ನಿವಾಸಿ **ಸಂಜು @ ಸಂಜ್ಯಾ ಮಲ್ಲಪ್ಪಾ ಮೇಕಳಿ ** (25) ಬಂಧಿತ ಆರೋಪಿ. ಕಳೆದ ಏಪ್ರಿಲ್ 11ರಂದು ನರಸಿಂಗಪೂರ ಗ್ರಾಮದ ಅಂಡರ್ ಪಾಸ್ ಬಳಿ **ಗಂಗಪ್ಪಾ ಕೊಡದವರ** ಎಂಬುವವರ ಬಜಾಜ್ ಪ್ಲಾಟಿನಾ ಬೈಕ್ ಕಳ್ಳತನವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆಗೆ ವಿಶೇಷ ತಂಡ ರಚಿಸಿದ್ದರು. ಏಪ್ರಿಲ್ 17ರಂದು ಬೆನಕನಹೊಳಿ ಹದ್ದಿಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಸಂಜ್ಯಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರಣಿ ಕಳ್ಳತನದ ಸತ್ಯಾಂಶ ಹೊರಬಂದಿದೆ.* ಬಂಧಿತ ಆರೋಪಿಯು ತನ್ನ ಐಷಾರಾಮಿ ಜೀವನ ಮತ್ತು ಮೋಜು-ಮಸ್ತಿಗಾಗಿ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಎಂದು ಒಪ್ಪಿಕೊಂಡಿದ್ದಾನೆ. ಆತನ ಮಾಹಿತಿಯ ಮೇರೆಗೆ ಬಜಾಜ್ ಪ್ಲಾಟಿನಾ, ಹಿರೋ ಸ್ಪ್ಲೆಂಡರ್, ಹೋಂಡಾ ಆಕ್ಟಿವಾ ಸೇರಿದಂತೆ ಒಟ್ಟು 8 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪಿ.ಐ **ಜೆ.ಎಫ್.ಮುಶಾಪುರಿ**, ಪಿ.ಎಸ್.ಐ **ಬಿ.ಕೆ. ಪಾಟೀಲ**, ಸಿಬ್ಬಂದಿಗಳಾದ **ಜಿ.ಬಿ. ನಾಗನ್ನವರ** ಮತ್ತು **ಪಿ.ಕೆ. ಕಿಳ್ಳಿಕೇತರ** ಅವರನ್ನೊಳಗೊಂಡ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

Tags:

error: Content is protected !!