Belagavi

ಮರಣೋತ್ತರ ನೇತ್ರದಾನದಿಂದ ಇಬ್ಬರು ಅಂಧರ ಬಾಳಿಗೆ ಬೆಳಕು ವಡಗಾವಿಯ ಮಡಿವಾಳಪ್ಪ ಕಲ್ಲೋಳಿ ನಿಧನ; ನೇತ್ರದಾನದ ಸಾರ್ಥಕತೆ

Share

ಕಲ್ಲೋಳಿ ಕುಟುಂಬದ ನಿರ್ಧಾರಕ್ಕೆ ಸಾರ್ವಜನಿಕರ ಮೆಚ್ಚುಗೆ
ಇಬ್ಬರು ಅಶಕ್ತರಿಗೆ ದೃಷ್ಟಿ ನೀಡಿದ ಕಲ್ಲೋಳಿ ಕುಟುಂಬದ ದಾನ
ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ನಿಂದ ನೇತ್ರದಾನ ಪ್ರಕ್ರಿಯೆ ಯಶಸ್ವಿ

ಬೆಳಗಾವಿಯ ವಡಗಾವಿ ವಿಷ್ಣು ಗಲ್ಲಿಯ ನಿವಾಸಿ ಮಡಿವಾಳಪ್ಪ ನರಸಪ್ಪ ಕಲ್ಲೋಳಿ ಅವರ ನಿಧನದ ನಂತರ, ಅವರ ಕುಟುಂಬದವರು ಸಾಮಾಜಿಕ ಹೊಣೆಗಾರಿಕೆ ಮೆರೆದು ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದರಿಂದ ಇಬ್ಬರು ದೃಷ್ಟಿಹೀನರ ಬಾಳಿಗೆ ಬೆಳಕು ಸಿಕ್ಕಂತಾಗಿದೆ.

ಮೂಲತಃ ಬೈಲಹೊಂಗಲ ತಾಲೂಕಿನವರಾದ ಮಡಿವಾಳಪ್ಪ ಕಲ್ಲೋಳಿ ಅವರ ನಿಧನದ ಬಳಿಕ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನೇತ್ರದಾನ ಪ್ರಕ್ರಿಯೆ ನಡೆಸಲಾಯಿತು. ಕೆಎಲ್ಇ ಡಾ. ಪ್ರಭಾಕರ್ ಕೋರೆ ಆಸ್ಪತ್ರೆಯ ನೇತ್ರ ಬ್ಯಾಂಕ್‌ಗೆ ಈ ನೇತ್ರಗಳನ್ನು ಹಸ್ತಾಂತರಿಸಲಾಯಿತು. ಮೃತರು ನಾಲ್ವರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನೇತ್ರದಾನದ ಈ ಮಹತ್ವದ ಕಾರ್ಯದಲ್ಲಿ ಮೃತರ ಭಾವಂದಿರಾದ ಆನಂದ ಸೋಮಶೇಖರ್ ಹರ್ತಿ ಹಾಗೂ ಸಂಜಯ್ ಸೋಮಶೇಖರ್ ಅಂಗಡಿ ಅವರು ಪ್ರಮುಖ ಸಹಕಾರ ನೀಡಿದರು. ತೀವ್ರ ದುಃಖದ ಸಂದರ್ಭದಲ್ಲೂ ಕಲ್ಲೋಳಿ ಕುಟುಂಬವು ತೆಗೆದುಕೊಂಡ ಈ ನಿರ್ಧಾರ ಸಮಾಜಕ್ಕೆ ಮಾದರಿಯಾಗಿದ್ದು, ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ನೇತ್ರ ತಜ್ಞರಾದ ಶಿವಾನಂದ ಬುಬನಾಳೆ ಹಾಗೂ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಡಾ. ಮಹಾಂತೇಶ್ ರಾಮಣ್ಣವರ ಅವರು ಕಲ್ಲೋಳಿ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಲ್ಲೋಳಿ ಕುಟುಂಬದ ಈ ನಿರ್ಧಾರ ಅತ್ಯಂತ ಶ್ಲಾಘನೀಯವಾಗಿದ್ದು, ಇದರಿಂದ ಇಬ್ಬರು ವ್ಯಕ್ತಿಗಳು ಪುನಃ ಜಗತ್ತನ್ನು ನೋಡಲು ಸಾಧ್ಯವಾಗಲಿದೆ ಎಂದು ಡಾ. ಮಹಾಂತೇಶ್ ರಾಮಣ್ಣವರ ತಿಳಿಸಿದ್ದಾರೆ.

Tags:

error: Content is protected !!