KHANAPUR

ಖಾನಾಪೂರ ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ದರ್ಬಾರ್: ಕೆಲಸ ಬಿಟ್ಟು ಹರಟೆ ಹೊಡೆಯುವ ಎಸ್‌ಡಿಎ – ಜನರ ಪರದಾಟ!

Share

* ಟೇಬಲ್ ಬಿಟ್ಟು ಹರಟೆ ಹೊಡೆಯುವ ಮಹಿಳಾ ಸಿಬ್ಬಂದಿ.
* ಜಾತಿ, ಆದಾಯ ಪ್ರಮಾಣ ಪತ್ರಕ್ಕಾಗಿ ಜನರ ಅಲೆದಾಟ.
* ದೂರು ನೀಡಿದರೂ ಕ್ರಮ ಕೈಗೊಳ್ಳದ ಮೇಲಾಧಿಕಾರಿಗಳು?
* ಕೆಲಸದ ವೇಳೆ ‘ಕಾಟಾಚಾರ’ದ ಕರ್ತವ್ಯ ಪ್ರದರ್ಶನ.

ಸರ್ಕಾರಿ ಕಚೇರಿ ಅಂದರೆ ಜನಸಾಮಾನ್ಯರ ಕೆಲಸಗಳು ಸುಗಮವಾಗಿ ನಡೆಯಬೇಕು. ಆದರೆ ಖಾನಾಪೂರ ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರ ಉಲ್ಟಾ ಸೀನ್ ಕಂಡುಬರುತ್ತಿದೆ. ಇಲ್ಲಿನ ಎಸ್‌ಡಿಎ ವಿನುತಾ ಎಂಬುವವರು ತಮ್ಮ ಕೆಲಸ ಬಿಟ್ಟು ಸಹೋದ್ಯೋಗಿಗಳೊಂದಿಗೆ ಹರಟೆ ಹೊಡೆಯುತ್ತಾ ಕಾಲಹರಣ ಮಾಡುತ್ತಿದ್ದು, ಕಚೇರಿಗೆ ಬರುವ ಜನಸಾಮಾನ್ಯರು ಕೆಲಸವಾಗದೆ ಅತಂತ್ರರಾಗಿದ್ದಾರೆ.

ಖಾನಾಪೂರ ತಹಶೀಲ್ದಾರ್ ಕಚೇರಿಯ ಎಸ್‌ಡಿಎ ವಿನುತಾ ಅವರ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಉಪ ತಹಶೀಲ್ದಾರ್ ತಗೊಳ್ಳಿ ಅವರ ಅಡಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಈ ಮಹಿಳಾ ಸಿಬ್ಬಂದಿ, ತಮ್ಮ ಸೀಟಿನಲ್ಲಿ ಇರುವುದಕ್ಕಿಂತ ಸಹೋದ್ಯೋಗಿಗಳ ಟೇಬಲ್ ಮುಂದೆ ಕುಳಿತು ಹರಟೆ ಹೊಡೆಯುವುದೇ ಹೆಚ್ಚಾಗಿದೆ. ದೂರದ ಹಳ್ಳಿಗಳಿಂದ ಕೆಲಸ ಕಾರ್ಯಗಳಿಗಾಗಿ ಬರುವ ಜನರು ಅಧಿಕಾರಿಯ ಸೀಟು ಖಾಲಿ ಇರುವುದನ್ನು ಕಂಡು ಕಚೇರಿಯ ತುಂಬೆಲ್ಲಾ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿನುತಾ ಅವರ ಈ ವರ್ತನೆಯ ಬಗ್ಗೆ ಈ ಹಿಂದೆಯೇ ಮೇಲಾಧಿಕಾರಿಗಳಾದ ಉಪ ತಹಶೀಲ್ದಾರ್ ತಗೊಳ್ಳಿ ಅವರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಸಮಯದಲ್ಲಿ ಸಾರ್ವಜನಿಕರ ಸೇವೆ ಮಾಡಬೇಕಾದ ಸಿಬ್ಬಂದಿ ಈ ರೀತಿ ಕಾಟಾಚಾರಕ್ಕೆ ಕೆಲಸ ಮಾಡಿದರೆ ಹೇಗೆ ಎಂಬ ಪ್ರಶ್ನೆ ಎದ್ದಿದೆ. ಇನ್ನಾದರೂ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರು ಈ ಬೇಜವಾಬ್ದಾರಿ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವರೇ ಎಂದು ಕಾದು ನೋಡಬೇಕಿದೆ.

Tags:

error: Content is protected !!