Belagavi

ಬೆಳಗಾವಿಯಲ್ಲಿ ಶಿವಜಯಂತಿ ಸಂಭ್ರಮ: ಇತಿಹಾಸ ತಿಳಿಸುವ ಸಜೀವ ರೂಪಕ ವಾಹನಗಳ ಮೆರವಣಿಗೆಗೆ ಪೊಲೀಸ್ ರಕ್ಷಣೆ ಕೋರಿ ಶ್ರೀರಾಮ ಸೇನೆ ಮನವಿ

Share

“ಕುಂದಾನಗರಿ ಬೆಳಗಾವಿಯಲ್ಲಿ ಶಿವಜಯಂತಿ ಮೆರವಣಿಗೆಯ ಸದ್ದು ಜೋರಾಗಿದೆ. ಏಪ್ರಿಲ್ 21 ರಂದು ನಡೆಯಲಿರುವ ಇತಿಹಾಸ ತಿಳಿಸುವ ಭವ್ಯ ಸಜೀವ ರೂಪಕ ವಾಹನಗಳ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಸುಗಮ ಆಯೋಜನೆಗೆ ಸಹಕರಿಸುವಂತೆ ಶ್ರೀರಾಮ ಸೇನೆಯು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಬೆಳಗಾವಿ ನಗರದ ಸಾಂಪ್ರದಾಯಿಕ ಶಿವಜಯಂತಿ ಮೆರವಣಿಗೆಯ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಪದಾಧಿಕಾರಿಗಳು ಇಂದು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಏಪ್ರಿಲ್ 21ರ ಮಂಗಳವಾರದಂದು ನಡೆಯಲಿರುವ ಈ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಐತಿಹಾಸಿಕ ಘಟನೆಗಳನ್ನು **ಸಜೀವ ರೂಪಕ ವಾಹನಗಳ** ಮೂಲಕ ಪ್ರದರ್ಶಿಸಲಾಗುತ್ತಿದೆ. ಈ ಎಲ್ಲಾ ಪ್ರದರ್ಶನಗಳು ಬಾಬಾಸಾಹೇಬ್ ಪುರಂದರೆ ಅವರ ‘ಶಿವಚರಿತ್ರೆ’ ಗ್ರಂಥದ ಅಧಿಕೃತ ದಾಖಲೆಗಳ ಆಧಾರದ ಮೇಲೆ ಸಿದ್ಧಗೊಂಡಿದ್ದು, ಇವುಗಳಿಂದ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದೆ.

ಸಂವಿಧಾನದ ವಿಧಿ 19(1)ರ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಶಾಂತಿಯುತವಾಗಿ ಈ ಸಂಭ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ. ಮೆರವಣಿಗೆಯ ಹಾದಿಯಲ್ಲಿ **ಸಜೀವ ರೂಪಕ ವಾಹನಗಳ** ಪ್ರದರ್ಶನಕ್ಕೆ ಅಥವಾ ಮಂಡಳಿಗಳ ಪದಾಧಿಕಾರಿಗಳ ಮೇಲೆ ಯಾವುದೇ ಅನಗತ್ಯ ಆಕ್ಷೇಪಗಳನ್ನು ಎತ್ತದಂತೆ ಪೊಲೀಸರಿಗೆ ಸೂಚನೆ ನೀಡಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಸಾರ್ವಜನಿಕ ಭಾವನೆ ಹಾಗೂ ಸಂಪ್ರದಾಯವನ್ನು ಗೌರವಿಸಿ, ಮೆರವಣಿಗೆಯು ನಿರ್ವಿಘ್ನವಾಗಿ ಸಾಗಲು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಶ್ರೀರಾಮ್ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತಕರ್ ಅವರು ಆಗ್ರಹಾಸಿದ್ದಾರೆ. ಅಲ್ಲದೇ ಆಡಳಿತ ಮಂಡಳಿಯ ನಿಯಮಗಳನ್ನು ಪಾಲಿಸುವುದಾಗಿ ಆಯೋಜಕರು ಭರವಸೆ ನೀಡಿದ್ದಾರೆ. ಬೈಟ್

ಈ ವೇಳೆ ವಿನಯ್ ಅಂಗ್ರೋಳ್ಳಿ, ಬಾಳು ಪವಾರ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.ಬೆಳಗಾವಿಯಲ್ಲಿ ಶಿವಜಯಂತಿ ಮೆರವಣಿಗೆಗೆ ಸಕಲ ಸಿದ್ಧತೆ

ಸಜೀವ ರೂಪಕ ವಾಹನಗಳ ಪ್ರದರ್ಶನಕ್ಕೆ ಭದ್ರತೆ
ಇತಿಹಾಸ ಬಿಂಬಿಸುವ ರೂಪಕ ವಾಹನಗಳ ಮೆರವಣಿಗೆ
ಶಾಂತಿಯುತ ಮೆರವಣಿಗೆ ನಡೆಸಲು ಆಯೋಜಕರ ಭರವಸೆ

Tags:

error: Content is protected !!