State

ಅಬ್ದುಲ್ ಜಬ್ಬಾರ್ ವಾಪಸಾತಿ ಬಗ್ಗೆ ಸತೀಶ್ ಜಾರಕಿಹೊಳಿ ಸಂಧಾನ ಕಾಂಗ್ರೆಸ್‌ನಲ್ಲಿ ‘ಗ್ರೂಪ್ ಪಾಲಿಟಿಕ್ಸ್’ ಇಲ್ಲ ಎಂದ ಡಿ.ಕೆ. ಶಿವಕುಮಾರ್!

Share

• ಅಬ್ದುಲ್ ಜಬ್ಬಾರ್ ಅಮಾನತು ಪ್ರಕರಣ
• ಸತೀಶ್ ಜಾರಕಿಹೊಳಿ-ಡಿಕೆಶಿ ಮಹತ್ವದ ಭೇಟಿ
• ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲ: ಡಿವೈಎಸ್ಪಿ
• ಅಲ್ಪಸಂಖ್ಯಾತರು, ದಲಿತರು ನಮ್ಮ ಶಕ್ತಿ

ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿದ್ದೇನೆ. ಅವರನ್ನು ವಾಪಸ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರನ್ನು ಕುಮಾರಪಾರ್ಕ್ನ ಸರ್ಕಾರಿ ನಿವಾಸದಲ್ಲಿಂದು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷಕ್ಕೆ ವಾಪಸ್ ತಗೋಬೇಕೆಂಬ ಬಗ್ಗೆ ಮಾತಾಡಿದ್ದೇನೆ. ಅಧ್ಯಕ್ಷರ ಬಳಿಯೂ ಕೆಲವು ರಿಪೋರ್ಟ್ ಇದೆ. ದಲಿತರು, ಅಲ್ಪಸಂಖ್ಯಾತರು ನಮ್ಮ ವೋಟರ್ಸ್. ಅಬ್ದುಲ್ ಜಬ್ಬಾರ್ ಜಸ್ಟಿಫೈ ಮಾಡಲಿ, ಹೈಕಮಾಂಡ್ ಅಪ್ರೂವ್ ಮಾಡಲಿ. ಆ ಮೇಲೆ ತೀರ್ಮಾನ ತೆಗೆದುಕೊಳ್ಳೋಣ ಎಂದಿದ್ದಾರೆ. ಡ್ಯಾಮೇಜ್ ಕಂಟ್ರೋಲ್ ಮಾಡುವುದಕ್ಕೆ ನಾವು ಬಂದಿದ್ದೇವೆ. ಕೆಲವೊಮ್ಮೆ ನಿರ್ಧಾರಗಳು ಆಗಿಬಿಡುತ್ತವೆ, ಸರಿಪಡಿಸಬೇಕು ಎಂದರು.

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನನ್ನ ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಎಲ್ಲವೂ ಪಾರ್ಟಿ ನಿರ್ಧಾರ. ಪಾರ್ಟಿ ಬಳಿ ತನ್ನದೇ ಆದ ವರದಿ ಇದೆ. ದೆಹಲಿ ಸೂಚನೆಯ ಮೇರೆಗೆ ಕ್ರಮವಾಗಿದೆ. ನಾವು ಮಾರ್ಗದರ್ಶನ ಮಾಡಬೇಕಾಗುತ್ತದೆ. ಎಲ್ಲರೂ ನನ್ನ ಮೇಲೆಯೇ ಹೇಳಬಹುದು. ಹೇಳಿದರೆ ನನಗೇನೂ ಚಿಂತೆಯಿಲ್ಲ. ಪಕ್ಷದ ಶಿಸ್ತಲ್ಲಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಪಕ್ಷ ಇರೋದೇ ಪರಿಶಿಷ್ಟರು, ಅಲ್ಪಸಂಖ್ಯಾತರು, ಅಹಿಂದ ಸಮುದಾಯದ ಪರ ಎಂದರುಸಿದ್ದರಾಮಯ್ಯ ಗುಂಪು, ಡಿ.ಕೆ.ಶಿವಕುಮಾರ್ ಗುಂಪು ಅಂತಾ ಯಾವುದೂ ಇಲ್ಲ. ನಾವು 146 ಶಾಸಕರು ಒಂದೇ ಗುಂಪು. ನಾನು, ಸಿಎಂ ಕೂತು ಎಷ್ಟು ಮಾತಾಡ್ತೇವೆ ಅಂತಾ ನಿಮಗೇನು ಗೊತ್ತು?. ದಿನವೂ ಕುಳಿತುಕೊಳ್ಳುತ್ತೇವೆ, ದಿನಾ ಮಾತನಾಡುತ್ತೇವೆ. ನೀವೇ ಸುಮ್ಮನೆ ಭಾಗ ಮಾಡುತ್ತಿದ್ದೀರಿ. ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ಗುಂಪು ಅಂತೀರಾ?. ಎಲ್ಲಿ, ಅವರೇನು ಸಿದ್ದರಾಮಯ್ಯ ಗುಂಪು ಅಂತ ಬೋರ್ಡ್ ಹಾಕಿಕೊಂಡಿದ್ದಾರಾ?. ನನ್ನ ಗುಂಪು ಅಂತ ನಾನು ಬೋರ್ಡ್ ಹಾಕಿಕೊಂಡಿದ್ದೀನಾ?. ಸುಮ್ನೆ ಸಿದ್ದರಾಮಯ್ಯ ಗುಂಪು, ಡಿಕೆ ಗುಂಪು ಅಂತ‌ ಹೇಳ್ತೀರಾ. ಯಾವ ಗುಂಪೂ ಇಲ್ಲ. ಇರೋದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು ಎಂದು ಹೇಳಿದರು.

Tags:

error: Content is protected !!