• ಹಂದಿಗನೂರ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ
• ಗೋವಾ ಬಿಜೆಪಿ ಮುಖಂಡರಿಂದ ದೇವಿಯ ದರ್ಶನ
• ಗ್ರಾಮದೇವಿಗೆ ಗಣ್ಯರಿಂದ ವಿಶೇಷ ಪೂಜೆ
• ಅತಿಥಿಗಳಿಗೆ ಜಾತ್ರಾ ಕಮಿಟಿಯಿಂದ ಸತ್ಕಾರ

ಬೆಳಗಾವಿ ತಾಲೂಕಿನ ಹಂದಿಗನೂರ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ ಜಾತ್ರೆಯಲ್ಲಿ ಗೋವಾ ಬಿಜೆಪಿಯ ಹಿರಿಯ ಮುಖಂಡರು ಭಾಗಿಯಾಗಿ ದೇವಿಯ ದರ್ಶನ ಪಡೆದುಕೊಂಡರು.

ಬೆಳಗಾವಿ ತಾಲೂಕಿನ ಹಂದಿಗನೂರನಲ್ಲಿ ನಡೆಯುತ್ತಿರುವ ಗ್ರಾಮದೇವಿ ಶ್ರೀ ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವದಲ್ಲಿ ಗೋವಾದ ಬಿಜೆಪಿ ಮುಖಂಡರಾದ ಪುಂಡಲೀಕ, ಪ್ರೋಫೆಸರ ಕುಂಬಾರ್, ಉಮಾಕಾಂತ್ ಪಾಟೀಲ್ ಸೇರಿದಂತೆ ಇನ್ನುಳಿದ ಗಣ್ಯರು ಭಾಗಿಯಾಗಿ ದೇವಿಯ ದರ್ಶನ ಪಡೆದುಕೊಂಡರು. ಜಾತ್ರೆಯ ಧಾರ್ಮಿಕ ಕೈಂಕರ್ಯಗಳನ್ನು ಪೂರ್ಣಗೊಳಿಸಿ ಪ್ರಸಾದವನ್ನು ಸ್ವೀಕರಿಸಿದರು. ಈ ವೇಳೆ ಜಾತ್ರಾ ಕಮೀಟಿಯೂ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಸತ್ಕರಿಸಿತು.

