• ನಾರಿ ಶಕ್ತಿ ವಂದನಾ ವಿಧೇಯಕಕ್ಕೆ ಬೆಂಬಲ
• ಬೆಳಗಾವಿಯಲ್ಲಿ ಮಹಿಳೆಯರ ಬೃಹತ್ ಬೈಕ್ ರ್ಯಾಲಿ
• ಮೋದಿ ನಿರ್ಧಾರಕ್ಕೆ ದಕ್ಷಿಣ ಕ್ಷೇತ್ರದ ಜೈಕಾರ
• ಸಾವಿರಾರು ಮಹಿಳೆಯರಿಂದ ಶಕ್ತಿ ಪ್ರದರ್ಶನ

ಲೋಕಸಭೆಯಲ್ಲಿ ಇಂದು ಪಿಎಂ ನರೇಂದ್ರ ಮೋದಿ ಅವರು ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡಲು ಜಾರಿ ಮಾಡಲು ಹೊರಟಿರುವ ನಾರಿ ಶಕ್ತಿ ವಂದನಾ ವಿಧೇಯಕಕ್ಕೆ ಬೆಂಬಲಿಸಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು.
ಬೆಳಗಾವಿಯ ಶಹಾಪೂರದ ಶಿವಚರಿತ್ರ ಸ್ಥಳದಿಂದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರ ನೇತೃತ್ವದಲ್ಲಿ ಲೋಕಸಭೆಯಲ್ಲಿ ಇಂದು ಪಿಎಂ ನರೇಂದ್ರ ಮೋದಿ ಅವರು ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡಲು ಜಾರಿ ಮಾಡಲು ಹೊರಟಿರುವ ನಾರಿ ಶಕ್ತಿ ವಂದನಾ ವಿಧೇಯಕಕ್ಕೆ ಬೆಂಬಲಿಸಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು. ಮಹಾಪೌರರಾದ ಪ್ರೀತಿ ಕಾಮಕರ ಸೇರಿದಂತೆ ಹಲವಾರು ಮಹಿಳೆಯರು ಅತ್ಯಂತ ಉತ್ಸಾಹದಿಂದ ಇದರಲ್ಲಿ ಭಾಗಿಯಾಗಿದ್ಧರು.
ನಾರಿ ಶಕ್ತಿ ವಂದನಾ ವಿಧೇಯಕವನ್ನು ಜಾರಿ ಮಾಡಲೂ ಪಿಎಂ ಮೋದಿ ಹೊರಟಿರುವುದು ಸಂತಸದ ವಿಷಯ. ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳಬಹುದು. ಮಹಿಳೆ ಕೇವಲ ಮನೆಯ ಮಹಾಲಕ್ಷ್ಮೀಯಲ್ಲ, ದೇಶದ ಶಕ್ತಿ. ಇದನ್ನ ಸಾರ್ಥಕವಾಗಿಸುವ ಅವಕಾಶವನ್ನು ಪಿಎಂ ಮೋದಿ ಅವರು ದೇಶದ ಮಹಿಳೆಯರಿಗೆ ನೀಡಿದ್ದಾರೆ. ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರ ನೇತೃತ್ವದಲ್ಲಿ ಸಹಿ ಸಂಗ್ರಹ ಮತ್ತು ಬೈಕ್ ರ್ಯಾಲಿ ಮೂಲಕ ಪಿಎಂ ಮೋದಿ ಅವರ ಕಾರ್ಯಕ್ಕೆ ಬೆಂಬಲಿಸುತ್ತಿದ್ದೇವೆ ಎಂದು ಬಿಜೆಪಿ ನಗರಾಧ್ಯಕ್ಷಾ ಗೀತಾ ಸುತಾರ್ ಹೇಳಿದರು.
ಮೋದಿ ಸರ್ಕಾರವು ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ಎಂದು ನೂತನ ವಿಧೇಯಕ ಜಾರಿ ಮಾಡಲು ಹೊರಟ ಪಿಎಂ ಮೋದಿ ಕಾರ್ಯವನ್ನು ರ್ಯಾಲಿಯಲ್ಲಿ ಭಾಗಿಯಾದ ಮಹಿಳೆಯರು ಶ್ಲಾಘಿಸಿದರು.
ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ಪಿಎಂ ಮೋದಿ ಅವರು ಮಹಿಳೆಯರ ಹಿತದಲ್ಲಿ ರಾಜಕೀಯದಲ್ಲಿಯೂ ಸ್ಥಾನವನ್ನು ನೀಡಲೂ ನಾರಿ ಶಕ್ತಿ ವಂದನಾ ವಿಧೇಯಕವನ್ನು ಜಾರಿ ಮಾಡಲೂ ಹೊರಟಿದ್ದಾರೆ. ಇದನ್ನು ಜಾರಿ ಮಾಡಲೇಬೇಕೆಂದು ಆಗ್ರಹಿಸಿ ಬೆಳಗಾವಿ ದಕ್ಷಿಣ ಕ್ಷೇತ್ರದ ಮಹಿಳೆಯರು ಬೆಂಬಲ ಸೂಚಿಸಿ ಬೈಕ್ ರ್ಯಾಲಿಯನ್ನು ಮಾಡುತ್ತಿದ್ದಾರೆ ಎಂದರು.
ಈ ವೇಳೆ ಸಾವಿರಾರು ಮಹಿಳೆಯರು ಭಾಗಿಯಾಗಿದ್ಧರು.
