Belagavi

ಬೆಳಗಾವಿಯಲ್ಲಿ ವಿಶ್ವರತ್ನ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಟ್ರೋಫಿ-2026ಗೆ ಇಂದಿನಿಂದ ವಿದ್ಯುಕ್ತ ಚಾಲನೆ ಕ್ರಿಕೆಟ್ ಆಡವಾಡಿ ಪಂದ್ಯಕ್ಕೆ ಚಾಲನೆ ನೀಡಿದ ಜನಪ್ರತಿನಿಧಿಗಳು…

Share

• ಬೆಳಗಾವಿಯಲ್ಲಿ ಅಂಬೇಡ್ಕರ್ ಟ್ರೋಫಿಗೆ ವಿದ್ಯುಕ್ತ ಚಾಲನೆ
• ಶಾಸಕ ಆಸೀಫ್ ಸೇಠ್, ರಾಹುಲ್ ಜಾರಕಿಹೊಳಿ ಭಾಗಿ
• ಸರ್ದಾರ್ಸ್ ಮೈದಾನದಲ್ಲಿ ಕ್ರಿಕೆಟ್ ಹಬ್ಬದ ಸಂಭ್ರಮ.
• ಕ್ರೀಡಾ ಸ್ಫೂರ್ತಿ ಮೆರೆದ ಗಣ್ಯರು ಮತ್ತು ಆಟಗಾರರು

ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಮತ್ತು ಬೆಳಗಾವಿಯ ಕಂಗ್ರಾಳ ಗಲ್ಲಿಯ ಜೈ ಭೀಮ್ ಯುವಕ ಮಂಡಳದ ವತಿಯಿಂದ ವಿಶ್ವರತ್ನ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಟ್ರೋಫಿ-2026ಗೆ ಇಂದಿನಿಂದ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಮತ್ತು ಬೆಳಗಾವಿಯ ಕಂಗ್ರಾಳ ಗಲ್ಲಿಯ ಜೈ ಭೀಮ್ ಯುವಕ ಮಂಡಳದ ವತಿಯಿಂದ ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯ ಹಿನ್ನೆಲೆ ವಿಶ್ವರತ್ನ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಟ್ರೋಫಿ-2026ನ್ನು ಬೆಳಗಾವಿಯ ಸರ್ದಾರ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಪಂದ್ಯಾವಳಿಗೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್, ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ, ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ, ಡಿ ಡಿ ಪಿ ಐ ಲೀಲಾವತಿ ಹಿರೇಮಠ, ಬಿ.ಇ.ಓ ರವಿ ಭಜಂತ್ರಿ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್, ಬೆಳಗಾವಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ್ ರಾಯವ್ವಗೋಳ, ದಲಿತ ಮುಖಂಡ ಮಲ್ಲೇಶ್ ಚೌಗಲೆ, ಸಿದ್ರಾಯಿ ಮೇತ್ರಿ, ಪರಶುರಾಮ್ ವಗ್ಗೆನ್ನವರ, ನಝೀರ್ ಪಟ್ವೇಗಾರ, ಬಾಬು ಪುಜಾರಿ, ಸಿದ್ಧಪ್ಪ ಕಾಂಬಳೆ, ದೀಪಕ ಗುಡಗನಟ್ಟಿ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಪಂದ್ಯಾವಳಿಯನ್ನು ಉದ್ಘಾಟಿಸಲಾಯಿತು.

ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹಾಕಿದ ಬಾಲಿಗೆ ಬ್ಯಾಟು ಬೀಸಿ ಶಾಸಕ ಆಸೀಫ್ ಸೇಠ್ ಅವರು ಪಂದ್ಯಾವಳಿಗೆ ಚಾಲನೆಯನ್ನು ನೀಡಿದ್ದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ವಿಶ್ವರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯ ನಿಮಿತ್ಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದ ಆಯೋಜಕರಾದ ಸಿದ್ರಾಯಿ ಮೇತ್ರಿ, ಬಸವರಾಜ್ ರಾಯವ್ವಗೊಳ ಅವರ ಕಾರ್ಯವನ್ನು ಶ್ಲಾಘಿಸಿದರು. ಯುವಕರು ಸದೃಢ ಸಮಾಜ ನಿರ್ಮಾಣಕ್ಕೆ ಆಟೋಟಗಳಲ್ಲಿ ತೊಡಗಿಕೊಳ್ಳಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಯುವಕರಲ್ಲಿ ಕ್ರೀಡಾ ಮನೋಭಾವನೆ ಹೆಚ್ಚಾಗಬೇಕು. ಯುವಕರು ದೈಹಿಕ ಮತ್ತು ಮಾನಸೀಕವಾಗಿ ಸದೃಢರಾಗಬೇಕೆಂಬ ಉದ್ಧೇಶದಿಂದ ಡಾ. ಅಂಬೇಡ್ಕರರ ಜಯಂತಿಯ ಅಂಗವಾಗಿ ಕ್ರಿಕೇಟ್ ಪಂದ್ಯಾವಳಿಯನ್ನು ಆಯೋಜಿಸಿದ್ದ ಕಾರ್ಯವನ್ನು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ವಿವಿಧ ತಂಡಗಳು ಪಂದ್ಯಾವಳಿಯಲ್ಲಿ ರೋಚಕ ಪ್ರದರ್ಶನವನ್ನು ನೀಡಿದವು.

Tags:

error: Content is protected !!