Belagavi

ಡಿಸಿಸಿ ಬ್ಯಾಂಕ್ ನಿರ್ಧಾರಕ್ಕೆ ಶಶಿಕಾಂತ ಗುರೂಜಿ ಕೆಂಗಣ್ಣು: ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಕೋಟಿ ಕೋಟಿ ಸಾಲ ನೀಡಲು ರೈತ ಮುಖಂಡರ ವಿರೋಧ!

Share

• ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಬ್ಯಾಂಕ್‌ಗೆ ಎಚ್ಚರಿಕೆ
• ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಸಾಲ ನೀಡಲು ಆಕ್ರೋಶ
• ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ನಿರ್ಧಾರಕ್ಕೆ ವಿರೋಧ
• ಸಾಲ ನೀಡಿಕೆ ನಿಲ್ಲಿಸದಿದ್ದರೆ ಬೃಹತ್ ಹೋರಾಟ

ಡಿಸಿಸಿ ಬ್ಯಾಂಕ್ ರೈತರ ಬ್ಯಾಂಕ್ ಆಗಿದ್ದು, ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡುತ್ತಿರುವುದು ಖಂಡನೀಯ ಎಂದು ರೈತ ಮುಖಂಡ ಶಶಿಕಾಂತ ಗುರೂಜಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗಮ ಸಕ್ಕರೆ ಕಾರ್ಖಾನೆಗೆ 27 ಕೋಟಿ ಸಾಲ ಮಂಜೂರು ಮಾಡುವುದಾಗಿ ಡಿಸಿಸಿ ಬ್ಯಾಂಕ್ ಸಭೆಯಲ್ಲಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ನಿರ್ಧಾರ ಕೈಗೊಂಡಿರುವುದನ್ನು ಟೀಕಿಸಿದರು.
ಇದೇ ವೇಳೆ ಬೆಳಗಾಂ ಶುಗರ್ಸ್ ಸಂಸ್ಥೆಯೂ 16 ಕೋಟಿ ಸಾಲಕ್ಕಾಗಿ ಮನವಿ ಮಾಡಿರುವುದಾಗಿ ತಿಳಿಸಿದ ಅವರು, ಈಗಾಗಲೇ ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಮರುಮರು ಸಾಲ ನೀಡುವುದು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.
ರೈತರ ಹಣದಿಂದ ನಡೆಯುವ ಬ್ಯಾಂಕ್ ಇಂತಹ ಸಂಸ್ಥೆಗಳಿಗೆ ಹಣ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಚುನ್ನಪ್ಪ ಪೂಜಾರಿ ಮಾತನಾಡಿ, ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಗೆ 297 ಸಾಲ ಕೊಡಲು ನಿನ್ನೆ ಬುಧವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಂಜಯ ಪಾಟೀಲ ಮಾಜಿ ಶಾಸಕ ಅವರಿಗೆ 123 ಕೋಟಿ ಸಾಲ ಕೊಡಲು ನಿರ್ಧಾರ ಮಾಡಿದ್ದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಾಲದಲ್ಲಿ ಇರುವ ಸಕ್ಕರೆ ಕಾರ್ಖಾನೆ ಗಳಿಗೆ ಸಾಲ ಕೊಡಬಾರದು , ರಾಜಕಾರಣ ಮಾಡಿ ಡಿಸಿಸಿ ಬ್ಯಾಂಕ್ ಹಾಳು ಮಾಡಬೇಡಿ ಎಂದು ಹೇಳಿದರು.
ಜಯಶೀಲ ಶೆಟ್ಟಿಗೆ ಸಾಲ ಕೊಟ್ಟು ಮುಜುಗರ ಉಂಟು ಮಾಡಿದ್ದೀರಿ ಅದರ ಬದಲು ರೈತರಿಗೆ ಸಾಲ ಕೊಡಿ ಇಲ್ಲದಿದ್ದರೇ ಹೋರಾಟ ನಡೆಸಲಾಗವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರೇಂ ಚೌಗಲಾ, ಪ್ರಕಾಶ ಉಮರಾಣಿ, ಶಿವಾನಂದ ಮೆಕ್ಕಳಕಿ, ಶಿವಾನಂದ ಮುಗಳಿ,ಮುಂತಾದವರು ಉಪಸ್ಥಿತರಿದ್ದರು

Tags:

error: Content is protected !!