ಲಾರಿ ಪಲ್ಟಿಯಾಗಿದ್ದಕ್ಕೆ ಚಾಲಕನಿಗೆ ದಂಡ

ಮಾಲೀಕನಿಂದ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ
ಪೊಲೀಸ್ ದೂರು ನೀಡಿದರೆ ಕೊಲೆ ಬೆದರಿಕೆ
ವೈರಲ್ ಆಯ್ತು ಮಾಲೀಕನ ರಾಕ್ಷಸೀ ಕೃತ್ಯ
ಆತ ವೃತ್ತಿಯಲ್ಲಿ ಬಡ ಲಾರಿ ಚಾಲಕ.ಬೇರೆಯವ್ರ ಲಾರಿ ಮೇಲೆ ದಿನಗೂಲಿ ಆದಾರದಲ್ಲಿ ಲಾರಿ ಓಡಿಸುತ್ತಿದ್ದ.ಲಾರಿ ಪಲ್ಟಿ ಆಗಿದ್ದಕ್ಕೆ ಲಾರಿ ಮಾಲೀಕ ಚಾಲಕನ ಮೇಲೆ ಮಾರಣನಾಂತಿಕ ಹಲ್ಲೆಗೈದ ವಿಡಿಯೋ ವೈರಲ್ ಆಗಿವೆ.ಡ್ರೈವರ್ ಮೇಲೆ ಹಲ್ಲೆ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ….
ಒಂದೆಡೆ ಚಾಲಕನಿಗೆ ಮನಸೋ ಇಚ್ಚೆ ಥಳಿಸುತ್ತಿರೋ ಲಾರಿ ಮಾಲೀಕ.ಮತ್ತೊಂದೆಡೆ ಮಗನಿಗೆ ಲಾರಿ ಮಾಲೀಕ ಜೀವ ಬೇದರಿಕೆ ಹಾಕಿದ್ದಾನೆ ಎಂದು ತಾಯಿ ಕಣ್ಣೀರು. ಇಂತಹ ಘಟನೆ ನಡೆದಿದ್ದು ಟಕ್ಕಳಕಿ ಬಳಿ.ಹೌದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕನ್ನೋಳ್ಳಿ ಗ್ರಾಮದ ಬಡ ಚಾಲಕ ಶಿವಯ್ಯ ತಿಕೊಟಾ ತಾಲ್ಲೂಕಿನ ಟಕ್ಕಳಕಿ ಗ್ರಾಮದ ಮರಿಭಾ ಪಾಂಡರೆ ಅವ್ರ ಲಾರಿ ಮೇಲೆ ಚಾಲಕನಾಗಿ ಕೆಲಸ ಮಾಡ್ತಿದ್ದ.ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಆಗಿದ್ದಕ್ಕೆ,ಲಾರಿ ಮಾಲೀಕ ನಡುರಸ್ತೆಯಲ್ಲಿ ಮನಸೋ ಇಚ್ಚೆ ಹಲ್ಲೆ ನಡೆಸುತ್ತಿರೋ ವಿಡಿಯೋ ವೈರಲ್ ಆಗಿದ್ದು,ವಿಡಿಯೋ ವೈರಲ್ ಬೆನ್ನಲ್ಲೆ ಲಾರಿ ಚಾಲಕ ಹಲ್ಲೆಗೊಳಗಾದ ಶಿವಯ್ಯನಿಗೆ ಕೇಸ್ ಕೊಡದಂತೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಚಾಲಕ ಶಿವಯ್ಯನ ತಾಯಿ ಕಣ್ಣೀರು ಹಾಕಿ ಆರೋಪಿಸಿದ್ದಾರೆ…
ಇನ್ನು ಕನ್ನೊಳ್ಳಿ ಗ್ರಾಮದ ನಿವಾಸಿಯಾದ ಚಾಲಕ ಶಿವಯ್ಯನ ಮೇಲೆ ಲಾರಿ ಮಾಲೀಕ ಮರಿಭಾ ಪಾಂಡರೆ ಅವರು ಪೈಪ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ವೈರಲ್ ಆಗಿದ್ದು,ಹಲ್ಲೆ ನಡೆಸಿದ ಲಾರಿ ಮಾಲಿಕ ಮರಿಭಾ ಪಾಂಡರೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಟಕ್ಕಳಕಿ ಗ್ರಾಮದ ನಿವಾಸಿಯಾಗಿದ್ದು,ಈ ಹಿಂದೆಯೂ ಲಾರಿ ಮಾಲೀಕ ಮೂರನಾಲ್ಕು ಜನ ಚಾಲಕರಿಗೆ ಹೀಗೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿದೆ.ಅಮಾನವೀಯವಾಗಿ ಹಲ್ಲೆ ನಡೆಸಿದ ಮಾರಿಭಾ ಪಾಂಡರೆ ಮೇಲೆ ಕಠಿಣ ಕ್ರಮಕ್ಕೆ ಹಲ್ಲೆಗೊಳಗಾದ ಶಿವಯ ಒತ್ತಾಯಿಸಿದ್ದಾನೆ.ಹಲ್ಲೆಯ ನಂತರ ಚಾಲಕ ಶಿವಯ್ಯ ಕಣ್ಣೀರು ಹಾಕುತ್ತಾ, ತನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ..
ಒಟ್ಟಿನಲ್ಲಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು,ಬಡ ಚಾಲಕನ ಮೇಲಿನ ದೌರ್ಜನ್ಯವನ್ನ ಸಾರ್ವಜನಿಕರು ಖಂಡಿಸುತ್ತಿದ್ದು,ಪ್ರಕರಣದ ವಿಡಿಯೋ ಆಧರಿಸಿ ಪೊಲೀಸರು ಎಪ್ ಐಆರ್ ದಾಖಲಿಸಿಕೊಂಡು ಕ್ರಮವಹಿಸುವಂತೆ ಜನ್ರು ಮನವಿ ಮಾಡಿದ್ದಂತೂ ಸುಳ್ಳಲ್ಲ…
