• ಬೆಳಗಾವಿಯಲ್ಲಿ ಸಂವಿಧಾನ ಶಿಲ್ಪಿಯ ಜಯಂತಿ ಆಚರಣೆ
• ಅಂಬೇಡ್ಕರ್ ಪ್ರತಿಮೆಗೆ ಗಣ್ಯರಿಂದ ಪುಷ್ಪ ನಮನ
• ವಿಕಸಿತ ಭಾರತಕ್ಕಾಗಿ ಬಾಬಾಸಾಹೇಬರ ತತ್ವ ಅನಿವಾರ್ಯ
• ಸಮಾನತೆಯ ಸಂವಿಧಾನವೇ ದೇಶದ ದೊಡ್ಡ ಶಕ್ತಿ

ಭಾರತವೂ ವಿಕಸಿತ ಮತ್ತು ಸಮೃದ್ಧವಾಗಬೇಕಾದರೇ, ಅಂಬೇಡ್ಕರರ ವಿಚಾರಧಾರೆಗಳನ್ನು ಜಾರಿಗೆ ತರಬೇಕು ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಹೇಳಿದರು.
ಇಂದು ಸಂವಿಧಾನ ಶಿಲ್ಪಿ ವಿಶ್ವರತ್ನ ಬೋಧಿಸತ್ವ ಡಾ. ಬಾಬಾಸಾಹೇಬ್ ಅಂಬೇಡ್ಕರರ 135ನೇ ಜಯಂತಿಯನ್ನು ಬೆಳಗಾವಿಯಲ್ಲಿ ಆಚರಿಸಲಾಯಿತು. ಈ ವೇಳೆ ಬೆಳಗಾವಿಯ ಉದ್ಯಾನದಲ್ಲಿರುವ ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ವೇಳೆ ಮಹಾಪೌರರಾದ ಪ್ರೀತಿ ಕಾಮಕರ ಅವರು, ಬೆಳಗಾವಿ ಮಹಾನಗರದ ಜನತೆಗೆ ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭಾಷಯಗಳನ್ನು ಕೋರಿದರು.
ಉಪಮಹಾಪೌರ ಹನುಮಂತ ಕೊಂಗಾಲಿ ಅವರು ಬಾಬಾಸಾಹೇಬರು ಬರೆದ ಸಂವಿಧಾನ ದೇಶದ ಎಲ್ಲ ನಾಗರೀಕರಿಗೂ ಸಮಾನತೆಯಡಿ ಬದುಕುವ ಹಕ್ಕನ್ನು ನೀಡಿದೆ. ಅಂಬೇಡ್ಕರರ ತತ್ವದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು, ಬಾಬಾಸಾಹೇಬರು ಭಾರತಕ್ಕಾಗಿ ಕಾಣಿದ ಕನಸನ್ನು ನನಸಾಗಿಸಲು ಎಲ್ಲರೂ ಪ್ರಯತ್ನಿಸಬೇಕು. ಭಾರತವೂ ವಿಕಸಿತ ಮತ್ತು ಸಮೃದ್ಧವಾಗಬೇಕಾದರೇ, ಅಂಬೇಡ್ಕರರ ವಿಚಾರಧಾರೆಗಳನ್ನು ಜಾರಿಗೆ ತರಬೇಕು ಎಂದರು.
ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಹಿಂದೂ ಧರ್ಮ ಈ ದೇಶದಲ್ಲಿ ಜೀವಂತವಾಗಿರುವುದು ಛತ್ರಪತಿ ಶಿವಾಜೀ ಮಹಾರಾಜರಿಂದ ಮತ್ತು ಪ್ರಜಾಪ್ರಭುತ್ವ ಜೀವಂತವಾಗಿರುವುದು ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ. ಅದೇ ರೀತಿ ಮಾನವಿಯತೇ ಜೀವಂತವಾಗಿರುವುದು ಅಣ್ಣ ಬಸವಣ್ಣನವರಿಂದ ಎಂದರು.
