Belagavi

ಬೆಳಗಾವಿ: ಅಗ್ನಿಶಾಮಕದಳದಿಂದ ಹುತಾತ್ಮ ದಿನಾಚರಣೆ; ಸೇವಾ ಸಪ್ತಾಹಕ್ಕೆ ಚಾಲನೆ; ಹುತಾತ್ಮ ಸಿಬ್ಬಂದಿಗೆ ಭಾವಪೂರ್ಣ ಗೌರವ

Share

• ಬೆಳಗಾವಿಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಆರಂಭ
• ಹುತಾತ್ಮ ಅಗ್ನಿಶಾಮಕ ಸಿಬ್ಬಂದಿಗೆ ಗೌರವ ಸಲ್ಲಿಕೆ
• ಏಪ್ರಿಲ್ 14 ರಿಂದ 20 ರವರೆಗೆ ಸಪ್ತಾಹ
• ಸುರಕ್ಷಿತ ಸಮಾಜಕ್ಕಾಗಿ ಅಗ್ನಿಶಾಮಕ ದಳದ ಜಾಗೃತಿ

ಬೆಳಗಾವಿಯ ಅಗ್ನಿಶಾಮಕ ಠಾಣೆಯಲ್ಲಿ ಇಂದು ‘ಅಗ್ನಿಶಾಮಕ ಸೇವಾ ಸಪ್ತಾಹ’ ಹಾಗೂ ಹುತಾತ್ಮರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಜನರ ಜೀವ ಮತ್ತು ಆಸ್ತಿ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಸಿಬ್ಬಂದಿಗೆ ಈ ಸಂದರ್ಭದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು.
ಬೆಳಗಾವಿ: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ನಗರದಲ್ಲಿಂದು ಅಗ್ನಿಶಾಮಕ ದಳದ ಸಿಬ್ಬಂದಿಗಳ ‘ಹುತಾತ್ಮ ದಿನಾಚರಣೆ’ ಹಾಗೂ ‘ಅಗ್ನಿಶಾಮಕ ಸೇವಾ ಸಪ್ತಾಹ’ಕ್ಕೆ ಚಾಲನೆ ನೀಡಲಾಯಿತು. ಜನರ ಜೀವ ಮತ್ತು ಆಸ್ತಿ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಸಿಬ್ಬಂದಿಗೆ ಈ ಸಂದರ್ಭದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು.
ಹುತಾತ್ಮ ದಿನದ ಹಿನ್ನೆಲೆ ಏಪ್ರಿಲ್ 14 ರಿಂದ 20 ರವರೆಗೆ ನಡೆಯಲಿರುವ ಈ ಸಪ್ತಾಹವು “ಸುರಕ್ಷಿತ ಶಾಲೆ, ಸುರಕ್ಷಿತ ಆಸ್ಪತ್ರೆ ಮತ್ತು ಅಗ್ನಿ ಸುರಕ್ಷತೆಯ ಅರಿವುಳ್ಳ ಸಮಾಜ” ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ.1942 ರಲ್ಲಿಯೇ ಕರ್ನಾಟಕದಲ್ಲಿ ಅಗ್ನಿಶಾಮಕ ದಳ ಪೊಲೀಸ್ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಿತು. 1965ರಲ್ಲಿ ಪೊಲೀಸ್ ಇಲಾಖೆಯಿಂದ ಬೇರ್ಪಟ್ಟು ಮೈಸೂರು ರಾಜ್ಯ ಅಗ್ನಿ ಶಾಮಕ ದಳವಾಗಿ, ಕರ್ನಾಟಕ ಅಗ್ನಿಶಾಮಕದಳ, ಅಗ್ನಿ ಶಾಮಕ ಸೇವೆಗಳು, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳಾಗಿ ಕೆಲಸ ನಿರ್ವಹಿಸುತ್ತಿವೆ. ಜನರ ತುರ್ತು ಪರಿಸ್ಥಿತಿಯಲ್ಲಿ ಜನರ ರಕ್ಷಣೆಗೆ ಜೀವದ ಹಂಗು ತೋರಿದು ಕೆಲಸ ಮಾಡುವ ಇಲಾಖೆ ಇದಾಗಿದೆ. 1944 ಏಪ್ರೀಲ್ 14 ರಂದು ಮುಂಬೈನಲ್ಲಿ ಸ್ಫೋಟಕ ವಸ್ತು ಸಾಗಿಸುವ ಹಡಗು ಬೆಂಕಿಗಿಡಾದಾಗ ಅದನ್ನು ನಂದಿಸಲು ಹೋಗಿ 66 ಅಧಿಕಾರಿಗಳು ಹುತಾತ್ಮರಾದರು. ಅವರಿಗೆ ಪ್ರತಿ ವರ್ಷವೂ ಗೌರವವನ್ನು ಸಲ್ಲಿಸಲಾಗುತ್ತದೆ ಎಂದು ಡೆಪ್ಯೂಟಿ ಕಮಾಂಡಂಟ್ ನಾಗೇಶ್ ಯಡಾಲ್ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಗ್ನಿ ಶಾಮಕ ದಳದ ಅಧಿಕಾರಿಗಳಾದ ರಂಗನಾಥ್, ಸ್ಟೇಷನ್ ಆಫೀಸರ್ ಶಿವಾಜೀರಾವ್ ಕೊರವಿ ಸೇರಿದಂತೆ ಸಿಬ್ಬಂದಿ ಭಾಗಿಯಾಗಿದ್ಧರು.

Tags:

error: Content is protected !!