ಹುಕ್ಕೇರಿ ನಗರದ ಮಹಾವೀರ ಮಲ್ಟಪರಪಜ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಶೀಘ್ರದಲ್ಲೇ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಲಾಗುವದು ಎಂದು ಸಂಸ್ಥೆಯ ಅದ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

ಅವರು ಇಂದು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಹುಕ್ಕೇರಿ ನಗರದ ಮಹಾವೀರ ಸೌಹಾರ್ದ ಸಹಕಾರಿ ಸಂಘವು ಅಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಬರುವ ದಿನಗಳಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಯು ಪಿ ಎಸ್ ಸಿ, ಕೆ ಪಿ ಎಸ್ ಸಿ ಮತ್ತು ಸ್ಪರ್ಧಾತ್ಮಕ ಪರಿಕ್ಷೆಗಳ ಪೂರ್ವ ತಯಾರಿಗಾಗಿ ನಮ್ಮ ಸಂಸ್ಥೆಯ ಸಿ ಆರ್ ಆಯ್ ಅನುದಾನದಲ್ಲಿ ಉಚಿತವಾದ ಸಾರ್ವಜನಿಕ ಗ್ರಂಥಾಲಯ, ಡಿಜಿಟಲ್ ಲೈಬ್ರರಿ ಸ್ಥಾಪಿಸಲಾಗುವದು ಎಂದರು
ಈ ಸಂದರ್ಭದಲ್ಲಿ ರೀಡ್ಸ ಸಂಸ್ಥೆಯ ಅದ್ಯಕ್ಷ ಅಶೋಕ ಪಾಟೀಲ, ಸಂಜಯ್ ನೀಲಜಗಿ,ಪ್ರಜ್ವಲ್ ನೀಲಜಗಿ
ರೋಹಿತ್ ಚೌಗಲಾ,ಬಾಹುಬಲಿ ಸೊಲ್ಲಾಪುರೆ, ಸುಕುಮಾರ ಖತಗಲ್ಲಿ ,ಬರ್ಮಪ್ಪ ಲಟ್ಟೆ ,ಕಿರಣ್ ಸೊಲ್ಲಾಪುರೆ ,ಅಕ್ಕಪ್ಪ ಖತಗಲ್ಲಿ ಸಿಬ್ಬಂದಿಗಳಾದ ರಾಜೇಂದ್ರ ಪಾಟೀಲ, ಸಂತೋಷ ರಜಪೂತ, ಪ್ರವೀಣ ಪಾಟೀಲ, ಪ್ರಕಾಶ ಗಜಬರ ಉಪಸ್ಥಿತರಿದ್ದರು.
