ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಮುಗಟಖಾನ ಹುಬಳ್ಳಿಯಲ್ಲಿ (ಎಂ.ಕೆ. ಹುಬ್ಬಳ್ಳಿ) ಜನಾಂಗೀಯ ಸೌಹಾರ್ದತೆಯ ಸಂಕೇತವಾಗಿ ಹಜರತ್ ಪೀರ ಮುಗುಟಶಾ ಅಲಿ ಅವರ ಗಂಧ ಹಾಗೂ ಉರುಸ್ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಕಳೆದ ಮೂರು ದಿನಗಳಿಂದ ನಡೆದ ಈ ಧಾರ್ಮಿಕ ಉತ್ಸವದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ಪಾಲ್ಗೊಂಡು ಕೃಪಾಶೀರ್ವಾದ ಪಡೆದರು.

ಶನಿವಾರ ರಾತ್ರಿ ಆರಂಭವಾದ ಭವ್ಯ ಗಂಧೋತ್ಸವಕ್ಕೆ ಸುರಭಿ ಬ್ಯಾಂಡ್ ಬೆಳಗಾವಿ ಮತ್ತು ಸರಸ್ವತಿ ಬ್ಯಾಂಡ್ ರವನೂರು ತಂಡಗಳ ರಸಮಂಜರಿ ಕಾರ್ಯಕ್ರಮವು ವಿಶೇಷ ಮೆರುಗು ನೀಡಿತ್ತು. ಸಂಪ್ರದಾಯದಂತೆ ಈ ಗಂಧದ ಮೆರವಣಿಗೆಯು ಗೌಡರ ಮನೆ ಮತ್ತು ಹಜೆ ಮನೆಯಿಂದ ಹೊರಟು, ಗಣಾಚಾರಿಯವರ ಓಣಿ, ಸಣ್ಣ ಅಗಸಿರಡ್ಡಿ ಹಾಗೂ ಪೇಟೆ ಓಣಿಯ ಮಾರ್ಗವಾಗಿ ಸಾಗಿ ಮುಂಜಾನೆ 5 ಗಂಟೆಗೆ ದರ್ಗಾ ಶರೀಫ್ ತಲುಪಿತು. ಜಾವಿದ ಮುಜಾವರ ಮತ್ತು ಅರೀಫ್ ಮುಜಾವರ ಅವರ ಆಕರ್ಷಕ ವಿದ್ಯುತ್ ದೀಪಾಲಂಕಾರವು ಪಟ್ಟಣದಾದ್ಯಂತ ಹಬ್ಬದ ಕಳೆಯನ್ನು ಹೆಚ್ಚಿಸಿತ್ತು. ಹಸನ್ ಪಠಾಣ್ ಅವರ ಹೂವಿನ ಅಲಂಕಾರವು ದರ್ಗಾದ ಸೌಂದರ್ಯಕ್ಕೆ ಸಾಕ್ಷಿಯಾಗಿತ್ತು.
ಈ ಕಾರ್ಯಕ್ರಮದ ಯಶಸ್ಸಿಗಾಗಿ ಮಾಜಿ ಜಿ.ಪಂ ಸದಸ್ಯ ಫಕ್ಕೀರಪ್ಪ ಸಕ್ರೇನ್ನವರ, ಮಕ್ತುಮ ಪಟೇಲ, ಸುಬಾನಿ ಅಗಸಿಬಾಗಿಲ, ಮಹ್ಮದ ಹನೀಫ ನಬುವಾಲೆ, ಯುಸುಫ, ಶ್ರೀಶೈಲ ತಿಗಡಿ, ಮಹಾಂತೇಶ ಗಾಣಗಿ, ಎಸ್.ಸಿ. ಗಣಾಚಾರಿ, ಶಂಕರ ಕಿಲ್ಲೇದಾರ, ಅನಂದ ಗಡಾದ, ಲಕ್ಷ್ಮಣ ಗೋಕಾಕ, ಅಬ್ದುಲಹಖ್ ಬಡೆಘರ್, ಮುಗುಟಸಾಬ್ ಜಾಮೀನದಾರ, ಮುಗುಟಸಾಬ್ ಹುಣಶೀಕಟ್ಟಿ, ಇಮಾಮ ಪಟೇಲ, ಅಮನ ಬಸರಗಿ, ಅಯಾಜ್ ನಬುವಾಲೆ ಮುಗಟಸಾಬ್ ಜಮಾದಾರ ಸೇರಿದಂತೆ ಅನೇಕರು ಶ್ರಮಿಸುತ್ತಿದ್ದಾರೆ.
ಪಟ್ಟಣ ಪಂಚಾಯತ ಅಧ್ಯಕ್ಷರಾದ ಪ್ರಕಾಶ ಕೊಡ್ಲಿ, ಉಪಾಧ್ಯಕ್ಷರಾದ ಮಂಜುನಾಥ ಕಡಕೋಳ, ಸದಸ್ಯರಾದ ಸುರೇಶ ಮುತ್ನಾಳ, ಲಕ್ಷ್ಮೀ ನಾಗನೂರ, ಫರಜನಾ ನಬುವಾಲೆ, ದೊಡ್ಡಪ್ಪಾ ಗಣಾಚಾರಿ, ಮಂಗಳಾ ದೇಮಟ್ಟಿ, ಸವಿತಾ ಹೊನ್ನಣ್ಣವರ, ದೇಮಪ್ಪಾ ಬಸರಗಿ, ಸಮೀರ ರಫೀಕ ಪಟೇಲ, ಸುಶೀಲಾ ಗಾರಗಿ , ಗದಿಗೆವ್ವ ಜಂಗಳಿ ಹಾಗೂ ಪ್ರಕಾಶ ಗಿರಜಿಮನಿ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಉತ್ಸವವು ಸಕಲ ಸಿದ್ಧತೆಗಳೊಂದಿಗೆ ನೆರವೇರಲಿದೆ. ಹೂವಿನ ಅಲಂಕಾರದ ಜವಾಬ್ದಾರಿಯನ್ನು ಹಸನ್ ಪಠಾಣ್ ವಹಿಸಿಕೊಂಡಿದ್ದಾರೆ. ಭಾನುವಾರ ಮತ್ತು ಸೋಮವಾರ ಮನಸೂರ ಕವ್ವಾಲ ತಂಡದ ಕವ್ವಾಲಿ ಕಾರ್ಯಕ್ರಮ ನಡೆಯಲಿವೆ.
