M K HUBLI

ಕಿತ್ತೂರು: ಎಂ.ಕೆ. ಹುಬ್ಬಳ್ಳಿಯಲ್ಲಿ ಭಾವೈಕ್ಯತೆಯ ಮೊಹರಂ; ಸರ್ವಧರ್ಮೀಯರಿಂದ ಶಾಂತಿಯುತ ಆಚರಣೆ!

Share

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಗ್ರಾಮದಲ್ಲಿ ಸಾಂಪ್ರದಾಯಿಕ ಮೊಹರಂ ಹಬ್ಬವನ್ನು ಅತ್ಯಂತ ಸೌಹಾರ್ದತೆ ಮತ್ತು ಸದ್ಭಾವನೆಯಿಂದ ಆಚರಿಸಲಾಗಿದೆ. ಜಾತಿ-ಧರ್ಮದ ಭೇದ ಮರೆತು ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ಆಚರಿಸುವ ಮೂಲಕ ಗ್ರಾಮಸ್ಥರು ಕೋಮು ಸೌಹಾರ್ದತೆಗೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಗ್ರಾಮದಲ್ಲಿ ಪುರಾತನ ಕಾಲದ ಸಾಂಪ್ರದಾಯಿಕ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಅತ್ಯಂತ ಸೌಹಾರ್ದತೆಯಿಂದ ಆಚರಿಸಿದರು. ಈ ಬಾರಿಯ ಹಬ್ಬದ ಆಚರಣೆಯಲ್ಲಿ ಐದು ಡೋಲಿ ಹಾಗೂ ಏಳು ದೇವರುಗಳ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷ ಮೆರುಗು ನೀಡಲಾಗಿತ್ತು.

ಹಬ್ಬದ ಅಂಗವಾಗಿ ಹಜರತ್ ಇಮಾಮ್ ಹಸನ್ ಮತ್ತು ಇಮಾಮ್ ಹುಸೇನ್ ಅವರ ಐತಿಹಾಸಿಕ ತ್ಯಾಗವನ್ನು ಭಕ್ತಿಯಿಂದ ಸ್ಮರಿಸಲಾಯಿತು. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಿತ್ತೂರು ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, ಸಾರ್ವಜನಿಕರು ಅತ್ಯಂತ ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ ಕೋಮು ಸೌಹಾರ್ದತೆಯ ಸಂದೇಶ ಸಾರಿದರು.

Tags:

error: Content is protected !!