londa

ಲೋಂಡಾ ಗುಂಜಿ ಮಾರ್ಗ ಮಧ್ಯದಲ್ಲಿ ಅಂಗಡಿ ಎಕ್ಸಪ್ರೆಸ್ ಗೆ ಕಾಡುಕೋಣ ಡಿಕ್ಕಿ ಕಾಡುಕೋಣ ಸ್ಥಳದಲ್ಲೇ ಸಾವು

Share

ಖಾನಾಪೂರ ತಾಲೂಕಿನ ಲೋಂಡಾ ಗುಂಜಿ ರೈಲು ಮಾರ್ಗದಲ್ಲಿ ಅಂಗಡಿ ಎಕ್ಸಪ್ರೆಸ್ ಗೆ ಕಾಡುಕೋಣ ಒಂದು ರಭಸದಿಂದ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿದೆನೆಂದರೆ ಬೆಂಗಳೂರು ನಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಅಂಗಡಿ ಎಕ್ಸಪ್ರೆಸ್ ಲೋಂಡಾ ಗುಂಜಿ ಮಾರ್ಗ ಮಧ್ಯದಲ್ಲಿ ಬೆಳ್ಳಗಿನ ಜಾವ ಐದರ ಸುಮಾರಿಗೆ ರೈಲು ಆಕಸ್ಮಿಕವಾಗಿ ಕೆಲವು ಹೊತ್ತು ನಿಂತಿತು ರೈಲು ನಿಂತ ನೋಡಿ ಪ್ರಯಾಣಿಕರು ಕೂಡಾ ಆತಂಕಕ್ಕೆ ಒಳಗಾಗದರು ಕಾಡು ಪ್ರದೇಶದಿಂದ ಆಕಸ್ಮಿಕವಾಗಿ ಒಂದು ಕಾಡು ಕೋಣ ಒಂದು ರಭಸದಿಂದ ಬಂದು ರೈಲ್ವೇ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿತ್ತು ರೈಲ್ವೆ ಹಳಿಯ ಮೇಲೆಯೇ ಬೃಹತ್ ಆಕಾರದ ಕಾಡು ಕೋಣದ ದೇಹ ಬಿದ್ದಿತ್ತು ಆದ್ದರಿಂದ ಸ್ವಲ್ಪ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು ಅದೇ ರೈಲ್ವೇಯಲ್ಲಿ ಖಾನಾಪೂರದ ಶಾಸಕ ವಿಠ್ಠಲ ಹಲಗೇಕರ ಅವರು ಕೂಡ ಪ್ರಯಾಣಿಸುತ್ತಿದ್ದದರು ರೈಲ್ವೇ ಆಕಸ್ಮಿಕವಾಗಿ ನಿಂತ ಕಾರಣ ಅವರು ರೈಲ್ವೇಯಿಂದ ಕೂಡಲೇ ಇಳಿದು ನೋಡಿ ಪರಿಸ್ಥಿತಿಯ ಬಗ್ಗೆ ಖಾನಾಪೂರ ಎಸಿಎಫ್ ಸುನೀತಾ ನಿಂಬರಗಿ ಅವರಿಗೆ ತಿಳಿಸಿದ್ದು ಅವರು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ,ಸಿಬ್ಬಂದಿಗಳಿಗೆ ಘಟನಾಸ್ಥಳಕ್ಕೆ ಕಳುಹಿಸಿ ರೈಲ್ವೇ ಮಾರ್ಗ ಸುಗಮಗೊಳಿಸಿ ರೈಲ್ವೆ ಸಾಗುವಂತೆ ವ್ಯವಸ್ಥೆ ಮಾಡಿದರು ಎಂದು ತಿಳಿದು ಬಂದಿದೆ.

Tags:

error: Content is protected !!