Uncategorized

ಧಾರವಾಡ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯ ಹಲಗೆ ಹಬ್ಬಕ್ಕೆ ಚಾಲನೆ..

Share

ಹೋಳಿ ಹಬ್ಬದ ನಿಮಿತ್ತವಾಗಿ ಕಳೆದ ಸುಮಾರು ವರ್ಷಗಳಿಂದ ಧಾರವಾಡದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಹಲಗೆ ಹಬ್ಬಕ್ಕೆ, ಧಾರವಾಡ ಹೊಸಯಲ್ಲಾಪುರದ ವೀರಭದ್ರೇಶ್ವರ ದೇವಸ್ಥಾನದಿಂದ ಚಾಲನೆ ನೀಡಲಾಯಿತು. ಹಲಗೆ ಹಬ್ಬದಲ್ಲಿ ನೂರಾರು ಯುವಕರು ಹಲಗೆ ಬಾರಿಸುತ್ತಾ ಹೆಜ್ಜೆ ಹಾಕಿದರು.

ಧಾರವಾಡ ಹೊಸಯಲ್ಲಾಪುರ ಕಾಮನಕಟ್ಟಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿದ ನಂತರ, ಮಾಜಿ ಶಾಸಕರಾದ ಅಮೃತ ದೇಸಾಯಿ ಹಾಗೂ ಸೀಮಾ ಮಸೂತಿಯವರು ಚಾಲನೆ ನೀಡಿದರು. ಹಲಗೆ ನಾದಗಳ ಘೋಷದಲ್ಲಿ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತ್ತಿದಂತೆ ನೂರಾರು ಯುವಕರು ಹಲಗೆ ಬಡಿದು ಹೋಳಿ ಸಂಭ್ರಮ ಹೆಚ್ಚಿಸಿದರು. ಹಲಗೆ ಕಲಾವಿದರು ತಮ್ಮ ಸಂಪ್ರದಾಯಬದ್ಧ ವೇಷಭೂಷಣಗಳಲ್ಲಿ ಮನಮೋಹಕ ಪ್ರದರ್ಶನ ನೀಡಿ ಜನರನ್ನು ರಂಜಿಸಿದರು. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಾ ಸಂಭ್ರಮದ ವಾತಾವರಣ ಸೃಷ್ಟಿಸಿತು.

ಮಹಿಳೆಯರು, ಯುವಕರು ಹಾಗೂ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿ ಹಬ್ಬಕ್ಕೆ ಇನ್ನಷ್ಟು ಕಳೆ ತಂದರು. ಹಲಗಿ ನಾದದ ಗರ್ಜನೆಯೊಂದಿಗೆ ಧಾರವಾಡದ ಸಂಸ್ಕೃತಿ ಮತ್ತು ಭಕ್ತಿ ಭಾವನೆಗಳು ಒಂದಾಗಿ ಮೂಡಿಬಂದ ಈ ಹಬ್ಬವು ನಗರಕ್ಕೆ ಮತ್ತಷ್ಟು ಮೆರುಗು ತಂದಿತು. ಹೋಳಿ ಹಬ್ಬದ ಅಂಗವಾಗಿ ನಡೆಯುವ ಈ ಹಲಗೆ ಹಬ್ಬ ವಿಶೇಷ ಮೆರಗು ತಂದುಕೊಟ್ಟಿತು. ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಸೇರಿದಂತೆ ಇತರರು ಹಲಗೆ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಇದೇವೇಳೆ ಮಾತನಾಡಿದ ಮಾಜಿ ಶಾಸಕ ಅನೃತ ದೇಸಾಯಿ ಹಿಂದು ಯುವ ಸಮುದಾಯದ ಹಬ್ಬವೆಂದೆ ಹೋಳಿ ಹಬ್ಬ ಖ್ಯಾತಿ ಪಡೆದುಕೊಂಡಿದೆ. ಹೋಳಿ ಹಬ್ಬಕ್ಕೆ ಹಲಗೆ ಸಂಪ್ರದಾಯಿಕ ಹಿನ್ನಲೆ ಹೊಂದಿದೆ. ಹಲಗೆಯನ್ನು ಒಂದು ಹಬ್ಬವಾಗಿ ಸಂಘಟನೆ ನಡೆಸಿಕೊಂಡು ಬೆಳಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.

 

Tags:

error: Content is protected !!