ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲಿಮಿರ್ಚಿ ಅವರನ್ನು ವರ್ಗಾಯಿಸಿ ಗೃಹ ಇಲಾಖೆಯೂ ಆದೇಶವನ್ನು ಹೊರಡಿಸಿದೆ.

ಕರ್ನಾಟಕ ಸರ್ಕಾರ ಗೃಹ ಇಲಾಖೆಯು 120 ಇನ್ಸಪೇಕ್ಟರಗಳ ವರ್ಗಾವಣೆಯನ್ನು ಮಾಡಿ, ಇಲಾಖೆಯ ಆಡಳಿತದಲ್ಲಿ ಬದಲಾವಣೆಗೆ ಪ್ರಯತ್ನಿಸಿದೆ. ನ.1 ರಂದು ಕರ್ನಾಟಕ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಯಲ್ಲಿ ತೊಡಗಿದ್ದ ಶುಭಂ ಶೇಳಕೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಬೆಳಗಾವಿ ಮಾಳಮಾರುತಿ ಸಿಪಿಐ ಜೆ.ಎಂ.ಕಾಲಿಮಿರ್ಚಿ ಅವರನ್ನು ಯಾವುದೇ ಸ್ಥಳ ತೋರಿಸದೇ ವರ್ಗಾಯಿಸಿ ಅವರ ಸ್ಥಳಕ್ಕೆ ಸಿಇಎನ್ ಇನ್ಸಪೇಕ್ಟರ್ ಬಾವುದ್ಧಿನ ಗಡ್ಡೇಕರ ಅವರನ್ನು ನೇಮಿಸಿದೆ. ಅದೇ ರೀತಿ ಕಾಕತಿಯ ಸಿಪಿಐ ಎಸ್.ಐ.ಗುರುನಾಥ್ ಅವರನ್ನು ಮುಧೋಳ ಸರ್ಕಲ್ ಇನ್ಸಪೇಕ್ಟರ್ ಆಗಿ ನೇಮಿಸಲಾಗಿದೆ.
