ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 4.90 ಕೋಟಿಗಳ ಅನುದಾನ ಮಂಜೂರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 4.90 ಕೋಟಿಗಳ ಅನುದಾನ ಮಂಜೂರಾದ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದರು.ಚಿಕ್ಕೋಡಿ ತಾಲೂಕಿನ ಹಳೆ ಯಡೂರ ಗ್ರಾಮದ ಶ್ರೀ ಪವಾಡಸಿದ್ದ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕಾಗಿ 15 ಲಕ್ಷ, ಚಂದೂರ ಗ್ರಾಮದ ಡಾ! ಬಿ. ಆರ್. ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕಾಗಿ 40 ಲಕ್ಷಗಳ ಅನುದಾನ, ಚಂದೂರ ಗ್ರಾಮದ ಪಠಾರ ಢೊನಿ ವಸಾಹತು ಮುಖಾಂತರ ಚಂದೂರ ಟೇಕ ಸೈನಿಕ್ ಟಾಕಳಿ ರಸ್ತೆಗೆ ಕೊಡುವ ರಸ್ತೆ ಸುಧಾರಣೆಗಾಗಿ 1 ಕೋಟಿ ಹತ್ತು ಲಕ್ಷ ರೂಪಾಯಿಗಳ ಅನುದಾನ,ಮಾಂಜರಿವಾಡಿ ಗ್ರಾಮದ ಪರಿಮತಿಯಲ್ಲಿ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ 1 ಕೋಟಿ ರೂಪಾಯಿ ಅನುದಾನ, ಪಟ್ಟಣಕುಡಿ ಗ್ರಾಮದ ಶ್ರೀ ದತ್ತ ದೇವಸ್ಥಾನದ ಹತ್ತಿರ ಸಮುದಾಯ ಭವನ ಕಟ್ಟಡ ಪೂರ್ತಿಗೊಳಿಸಲು 10 ಲಕ್ಷಗಳ ಅನುದಾನ ಮಂಜೂರಾಗಿದೆ ಎಂದರು.
ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯಲ್ಲಿ 6 ಪಿಕೆಪಿಎಸ್ ಸಂಘಗಳ ಕಟ್ಟಡ ನಿರ್ಮಾಣಕ್ಕಾಗಿ 2 ಕೋಟಿ 15 ಲಕ್ಷ ರೂಪಾಯಿಗಳ ಅನುದಾನ ಮಂಜೂರು, ಚಿಕ್ಕೋಡಿ ತಾಲೂಕಿನ ಬೆಳಗಲಿ ಗ್ರಾಮದ ಜೈ ಹನುಮಾನ ಪಿಕೆಪಿಎಸ್ ಸಂಘಕ್ಕೆ 35 ಲಕ್ಷ, ಜೋಡಟ್ಟಿ ಗ್ರಾಮದ ಶ್ರೀ ಬೀರೇಶ್ವರ ಪಿಕೆಪಿಎಸ್ 25 ಲಕ್ಷ, ನಾಗರಮುನ್ನೋಳಿ ಶಿವಯೋಗೇಶ್ವರ ಪಿಕೆಪಿಎಸ್ 35 ಲಕ್ಷ ,ಶ್ರೀ ಸಿದ್ದೇಶ್ವರ ಪಿಕೆಪಿಎಸ್ 35 ಲಕ್ಷ ಹಾಗೂ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ಪಿಕೆಪಿಎಸ್ 35 ಲಕ್ಷ ಹಾಗೂ ಮಾಂಜರಿವಾಡಿ ಗ್ರಾಮದಲ್ಲಿ ಸಮುದಾಯ ಭವನಕ್ಕಾಗಿ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ ಅದರ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ ,ಸಿದ್ದಪ್ಪಾ ಮರ್ಯಾಯಿ, ದುಂಡಪ್ಪಾ ಕೋಟೇಪ್ಪಗೋಳ, ಮಹಾದೇವ ಈಟಿ, ಕಲ್ಲಪಾ ಕರಗಾಂವೆ. ಅನೀಲ ಪಾಟೀಲ, ಬಾಬು ಡೋಣೆ, ಅನೀಲ ಮಾನೆ. ಮಹೇಶ ಕಾಗವಾಡೆ, ಅಶೋಕ ಹವಳೆ, ಮಹಾದೇವ ಹವಳೆ, ತೇಜಗೌಡಾ ಪಾಟೀಲ, ಸಂಜು ಪಾಟೀಲ ,ಮಾರುತಿ ಕಾಂಬಳೆ ಹಳೇ ಯಡೂರ ಗ್ರಾಮದ ಪವಾಡ ಸಿದ್ದೇಶ್ವರ ದೇವಸ್ಥಾನದ ಕಮೀಟಿ ಸದಸ್ಯರು, ಚಂದೂರ ಗ್ರಾಮದ ಡಾ॥ ಬಿ.ಆರ್ ಅಂಬೇಡ್ಕರ ಸಮುದಾಯ ಕಮೀಟಿ ಸದಸ್ಯರು ಹಾಗು ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು ಹಾಗೂ ಗ್ರಾಮಸ್ಥರು, ಮಾಂಜರಿವಾಡಿ ಗ್ರಾಮದ ಗ್ರಾಮಸ್ಥರು ಸಾರ್ವಜನಿಕರು ಮತ್ತು ಬೆಳಗಲಿ, ಜೋಡಟ್ಟಿ, ನಾಗರಮುನ್ನೋಳ್ಳಿ ಯಡೂರ ಹಾಗೂ ಮಾಂಜರಿವಾಡಿ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
