Chikkodi

ಪಿಎಸ್‌ಐ ಆಗಿ ಬಡ್ತಿ ಪಡೆದ ಶಿಲ್ಪಾ ಸುರೇಶ ಖೋತ ಅವರಿಗೆ ಅದ್ದೂರಿಯ ಸನ್ಮಾನ

Share

ಕೊಲ್ಹಾಪುರ ಡಿವೈಎಸ್‌ಪಿ ಕಚೇರಿಯಲ್ಲಿ ಪಿಎಸ್‌ಐ ಹುದ್ದೆಗೆ ಬಡ್ತಿ ಪಡೆದ ಚಿಕ್ಕೋಡಿ ತಾಲೂಕಿನ ಉಳಾಗಡ್ಡಿವಾಡಿ ಗ್ರಾಮದ ಸೊಸೆ ಶ್ರೀಮತಿ ಶಿಲ್ಪಾ ಸುರೇಶ್ ಖೋತ್ ಅವರಿಗೆ ಉಳಾಗಡ್ಡಿವಾಡಿಯಲ್ಲಿ ನಾಗರಿಕ ಸನ್ಮಾನ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸ್ವಪ್ನಾಲಿ ಗಣೇಶ್ ಹುಕ್ಕೇರಿಬ”ಯಶಸ್ಸಿಗೆ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಅಗತ್ಯ. ಶಿಲ್ಪಾ ಅವರ ಈ ಸಾಧನೆಗೆ ಅವರ ಶ್ರಮ ಮತ್ತು ಪತಿ ಸುರೇಶ ಅವರ ಬೆಂಬಲವೇ ಕಾರಣ. ಮಹಿಳೆಯರು ಮತ್ತು ಯುವತಿಯರು ತಮ್ಮ ಗುರಿ ತಲುಪಿ ಸಾಧಕರಾಗಬೇಕು” ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ಶಿಲ್ಪಾ ಖೋತ್ 1993 ರಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕುಟುಂಬದ ಬೆಂಬಲದಿಂದ ಈ ಹಂತ ತಲುಪಿದ್ದೇನೆ. ಕಷ್ಟಕರ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸಿದ್ದು, ಇಂದಿನ ಯುವಜನತೆ ಮೊಬೈಲ್‌ನಂತಹ ಆಕರ್ಷಣೆಗಳಿಗೆ ಬಲಿಯಾಗದೆ ಅಭ್ಯಾಸ ಮಾಡಿ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸದಲಗಾದ ಗೀತಾಶ್ರಮದ ಶ್ರಧ್ದಾನಂದ ಸ್ವಾಮೀಜಿ ಮಾತನಾಡಿ ಶಿಲ್ಪಾ ಅವರ ಸಾಧನೆಗೆ ಪತಿಯ ಬೆಂಬಲವನ್ನು ಶ್ಲಾಘಿಸಿ, ಉಳಾಗಡ್ಡಿವಾಡಿ ಗ್ರಾಮವನ್ನು ‘ವಿಠ್ಠಲವಾಡಿ’ ಎಂದು ನಾಮಕರಣ ಮಾಡಲು ಸಲಹೆ ನೀಡಿದರು.ಚಿಂಚಣಿಯ ಶಿವಪ್ರಸಾದ ದೇವರು ಮಾತನಾಡಿ ಹಾಗೂ ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ರಂಜಿತ್ ಕದಂ,ಕಾಂಗ್ರೆಸ್ ‌ಮುಖಂಡ ರವಿ‌ ಮಿರ್ಜೆ ಸೇರಿದಂತೆ ಹಲವು ಗಣ್ಯರು ಶಿಲ್ಪಾ ಅವರ 24 ಗಂಟೆಗಳ ನಿಷ್ಠಾವಂತ ಸೇವೆಯನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಶ್ರೀಮತಿ ನೀಲಾಂಬಿಕಾ ಪ್ರಕಾಶ ಹುಕ್ಕೇರಿ, ಯುವ ನಾಯಕ ಉತ್ತಮ ಪಟೇಲ್, ಕೆಪಿಸಿಸಿ ಕಾರ್ಯದರ್ಶಿ ಮಹಾವೀರ ಮೋಹಿತೆ, ಚಿದಾನಂದ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸುಭಾಷ ಕಾತ್ರಾಳೆ, ತಾತ್ಯಾಸಾಹೇಬ ಕಾಟೆ, ಅಣ್ಣಾ ಇಂಗಳೆ, ಶೇಖರ ಪಾಟೀಲ,ಮಗಳು ವಾಸಂತಿ ಖೋತ್, ರಾಜೇಂದ್ರ ಕರಾಳೆ, ಮಲ್ಲಿಕಾರ್ಜುನ ಪಾಟೀಲ, ಶ್ಯಾಮ ರೇವಡೆ, ಕಿರಣ್ ಮಾಳಿ, , ಪ್ರಕಾಶ್ ವಂಟಮುತೆ, ಅಶ್ವತ್ ಶೀತೋಳೆ, ಅಕ್ಲೂಜ್‌ನ ಶಿಂಧೆ, ಮಾರುತಿ ಮಾನೆ, ಅಣ್ಣಾ ಗಿಡ್ಡ, ದಿಲೀಪ್ ದೇಸಾಯಿ, ಪ್ರಭಾಕರ ಖೋತ್, ಕೇಶವ ರಾಯ್‌ಜಾಧವ್, ಶೇಖರ್, ಕೃಷ್ಣ ಮಗದುಮ, ಮಹೇಶ ಖೋತ ಸೇರಿದಂತೆ ವಿವಿಧ ಗ್ರಾಮಗಳ ಅನೇಕ ಗಣ್ಯರು ಹಾಗೂ ಮಿತ್ರರು ಉಪಸ್ಥಿತರಿದ್ದರು.

Tags:

error: Content is protected !!