Gokak

ಜೆಡಿಎಸ್ ಉಪಾಧ್ಯಕ್ಷರ ಪ್ರತಾಪ್ ಪಾಟೀಲರನ್ನು ಗೋಕಾಕ ನಗರಕ್ಕೆ ಸ್ವಾಗತಿಸಿದ ಮಹಾಂತೇಶ್ ಕಡಾಡಿ…

Share

ರಾಯಬಾಗದಿಂದ ಡಿಸಿಸಿ ಬ್ಯಾಂಕ ಚುನಾವಣೆಗೆ ಸ್ಪರ್ಧಿಸಲ್ಲ; ಪ್ರತಾಪ್ ಪಾಟೀಲ

ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ್ ಅವರು ಇಂದು ಗೋಕಾಕಿಗೆ ಭೇಟಿ ನೀಡಿದರು. ತಮ್ಮ ಭೇಟಿ ಸೌಹಾರ್ದಯುತವಾಗಿದ್ದು, ಇದರಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಡಿಸಿಸಿ ಬ್ಯಾಂಕಿನ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಇಂದು ಗೋಕಾಕ ನಗರಕ್ಕೆ ಆಗಮಿಸಿದ್ದ ಮಾಜಿ ಸಚಿವ ದಿ. ವಿ ಎಲ್ ಪಾಟೀಲ ಅವರ ಸುಪುತ್ರ ಪ್ರತಾಪ್’ರಾವ್ ಪಾಟೀಲ ಹಾಗೂ ಅವರ ಪುತ್ರ ಶಿವರಾಜ್ ಪಾಟೀಲ್ ಅವರನ್ನು ಡಾ ಮಹಾಂತೇಶ ಕಡಾಡಿಯವರು ಸ್ವಾಗತಿಸಿದರು. ನಂತರ ಗೋಕಾಕ ನಗರಕ್ಕೆ ಆಗಮಿಸಿ ಶ್ರೀ ಮಹಾಲಕ್ಷ್ಮಿ ದೇವಿ ಆಶಿರ್ವಾದ ಪಡೆದು ಪುನೀತರಾದರು. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆ ಸಾಹುಕಾರರ ನಡುವೆ ಬಿರುಸಿನ ಕಸರತ್ತು ನಡಿಯುತ್ತಿದ್ದು, ಈ ಸಂದರ್ಭದಲ್ಲಿ ಗೋಕಾಕಿಗೆ ಭೇಟಿ ನೀಡುವ ಕಾರಣವೇನು ಎಂಬ ಮಾಧ್ಯಮಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾವು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದು, ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಲು ಬಂದಿದ್ದೇನೆ. ಮಹಾಂತೇಶ್ ಕಡಾಡಿ ಅವರಿಗೆ ಕಾಂಗ್ರೆಸ್’ನಿಂದ ಹೆಚ್ಚು ವೋಟ್ ಬಿದ್ದಿವೆ ಎಂದು ಟಿಕೇಟ್ ಕ್ಯಾನ್ಸಲ್ ಆಗಬಹುದು. ನಾನು ಮುಂದಿನ ಬಾರಿ ಟಿಕೇಟ್ ನೀಡ್ತೇನೆ ಎಂದು ವ್ಯಂಗ್ಯವಾಡಿದರು.

ಇನ್ನು ರಾಯಬಾಗ ಕ್ಷೇತ್ರದಿಂದ ಡಿಸಿಸಿ ಚುನಾವಣೆಯ ಕಣಕ್ಕಿಳಿಯುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಇದರ ಬಗ್ಗೆ ಹೆಚ್ಚು ಅಧ್ಯಯನವಿಲ್ಲ ಎಂದರು. ಇನ್ನು ಕಾಂಗ್ರೆಸ್’ಗೆ ಬರುವ ಯಾವುದೇ ಯೋಚನೆಯಿಲ್ಲ. ತಮ್ಮ ಪಕ್ಷವನ್ನು ಬಲಪಡಿಸಲು ತಾವು ಗೋಕಾಕಿಗೆ ಬಂದಿದ್ದು, ಇದರಿಂದ ಡಿಸಿಸಿ ಬ್ಯಾಂಕಿನ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

Tags:

error: Content is protected !!