ಬೆಳಗಾವಿಯ ಅಮನ್ ನಗರದಲ್ಲಿ ತಡೆ ಗೋಡೆ ಅಥವಾ ಗೇಟ್’ನ್ನು ನಿರ್ಮಿಸದೇ, ಮೇಲ್ಸೇತುವೆಯನ್ನೇ ನಿರ್ಮಿಸಬೇಕೆಂದು ಒತ್ತಾಯಿಸಿ ಇಂದು ಅಮನ್ ನಗರದ ರಹಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಬೆಳಗಾವಿಯ ಅಮನ್ ನಗರದಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇಂದು ಅಮನ್ ನಗರದ ರಹಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಅಮನ್ ನಗರದಲ್ಲಿ ತಡೆ ಗೋಡೆ ಅಥವಾ ಗೇಟ್’ನ್ನು ನಿರ್ಮಿಸದೇ, ಮೇಲ್ಸೇತುವೆಯನ್ನೇ ನಿರ್ಮಿಸಬೇಕೆಂದು ಆಗ್ರಹಿಸಿದರು.
ಈಗಾಗಲೇ ಅಮನ್ ನಗರದಲ್ಲಿ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಅದನ್ನ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿದೇ, ಜನಹಿತದಲ್ಲಿ ಅದರಲ್ಲಿ ಕೆಲವೊಂದಿಷ್ಟು ಮಾರ್ಪಾಡುಗಳನ್ನು ಮಾಡಿ ಕಾಮಗಾರಿಯನ್ನು ಮುಂದುವರೆಸಬೇಕು. ಶಾಲಾ ಕಾಲೇಜು, ರಹಿವಾಸಿ ಸಂಘಗಳು, ವ್ಯಾಪಾರಿಗಳು ಹೀಗೆ 14 ಸಂಘಗಳು ಈ ನಿರ್ಣಯಕ್ಕೆ ಬದ್ಧವಾಗಿವೆ ಎಂದು ಐಜಾಜ್ ಹಕೀಮ್ ಆಗ್ರಹಿಸಿದರು. ಬೈಟ್
ಅಮನ್ ನಗರಕ್ಕೆ ಸಂಪರ್ಕ ಕಲ್ಪಿಸಲು ಈಗಾಗಲೇ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೇ, ಕೆಲ ಜನರು ಇದನ್ನು ವಿರೋಧಿಸಿದ್ದಾರೆ. ಆದರೇ, ಅವರು ಭವಿಷ್ಯದ ನಷ್ಟಗಳನ್ನು ಯೋಚಿಸುತ್ತಿಲ್ಲ. ಅಮನ್ ನಗರದ ಜನರು ಮೇಲ್ಸೇತುವೆ ಬೇಕೆಂಬ ದೃಢ ನಿಶ್ಚಯವನ್ನು ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೇ, ಸ್ವತಃ ಭೇಟಿ ನೀಡಿ, ಮೇಲ್ಸೇತುವೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಅಯೂಬ್ ಜಕಾತಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಮನ್ ನಗರದ ರಹಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
