Belagavi

ಆಗಸ್ಟ್ 8 ರಿಂದ 25 ರ ವರೆಗೆ ಅಗ್ನಿವೀರ ನೇಮಕಾತಿ ಶಿಬಿರ

Share

ಆಗಸ್ಟ್ 8 ರಿಂದ 25 ರ ವರೆಗೆ ರಾಯಚೂರಿನ ಕರ್ನಾಟಕದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಅಗ್ನಿವೀರ ನೇಮಕಾತಿ ಶಿಬಿರ ನಡೆಯಲಿದೆ.

ಆಗಸ್ಟ್ 8 ರಿಂದ 25 ರ ವರೆಗೆ ರಾಯಚೂರಿನ ಕರ್ನಾಟಕದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಬೆಂಗಳೂರು ನೇಮಕಾತಿ ವಲಯದ ಮುಖ್ಯ ಕಚೇರಿ ಮತ್ತು ರಾಯಚೂರು ನಾಗರಿಕ ಆಡಳಿತದ ಅಂಗ ಸಹಕಾರದೊಂದಿಗೆ ಅಗ್ನಿವೀರ ನೇಮಕಾತಿ ಶಿಬಿರ ನಡೆಯಲಿದೆ. (a) ಬೆಳಗಾವಿ (b) ಬೀದರ್ (c) ಕಲಬುರಗಿ (d) ಕೊಪ್ಪಳ (e) ರಾಯಚೂರು ಮತ್ತು (f) ಯಾದಗಿರಿಯಿಂದ ಆಯ್ಕೆಯಾದ ಅಭ್ಯರ್ಥಿಗಳಿಗಾಗಿ ನಡೆಯಲಿದೆ.
ಮಾರ್ಚ್ 12 ರಂದು ಬೆಳಗಾವಿ ಸೇನಾ ನೇಮಕಾತಿ ಕಚೇರಿಯೂ ವಯೋಮಿತಿ, ಶಿಕ್ಷಣ ಅರ್ಹತೆ ಸೇರಿದಂತೆ ಮಾನದಂಡಗಳನ್ನು ಪ್ರಕಟಿಸಲಿದೆ.

ಸಾಮಾನ್ಯ ಪ್ರವೇಶ ಪರೀಕ್ಷೆಯ (CEE) ಫಲಿತಾಂಶವನ್ನು ಈಗಾಗಲೇ www.joinindianarmy.nic.in ನಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಈಗಾಗಲೇ ನೀಡಲಾಗಿದೆ. ಇದೇ ಪ್ರವೇಶ ಪತ್ರವನ್ನು ಭಾರತೀಯ ಸೇನೆಯ ವೆಬ್‌ಸೈಟ್‌ನಿಂದ ಕೂಡ ಪಡೆಯಬಹುದು. ಅಭ್ಯರ್ಥಿಗಳು ತಮ್ಮ ಖಾತೆ ಪ್ರವೇಶ ಹಾಗೂ ನೋಂದಾಯಿತ ಇಮೇಲ್ ಐಡಿ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರವೇಶ ಪತ್ರದಲ್ಲಿ ನಮೂದಿಸಿರುವ ದಿನಾಂಕದಂದು ಶಿಬಿರದಲ್ಲಿ ಹಾಜರಾಗಬೇಕು. ಅಭ್ಯರ್ಥಿಗಳನ್ನು ಯಾವುದೇ ದಳ್ಳಾಲಿ ಅಥವಾ ಮಧ್ಯವರ್ತಿಗಳ ನೆರವಿಗೆ ಭರವಸೆಯಿಡದಂತೆ ಎಚ್ಚರಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆನ್‌ಲೈನ್ CEE, ನೇಮಕಾತಿ ಶಿಬಿರದಲ್ಲಿ ನಡೆಸುವ ಪರೀಕ್ಷೆಗಳು ಹಾಗೂ ಅಂತಿಮ ಮೇರೆಟ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ನೇಮಕಾತಿ ನಿರ್ದೇಶಕರಾದ ಕರ್ನಲ್ ಎ.ಕೆ. ಉಪಾಧ್ಯೆ ತಿಳಿಸಿದ್ದಾರೆ.

Tags:

error: Content is protected !!