Belagavi

ಶಾರ್ಟ್ ಸರ್ಕ್ಯೂಟ್ ನಿಂದ ಬೆಳಗಾವಿ ಸಿಬಿಟಿ ಆವರಣದ ಸ್ವೀಟ್ ಮಾರ್ಟ್ ನಲ್ಲಿ ಹೊತ್ತಿಕೊಂಡ ಬೆಂಕಿ

Share

ಬೆಳಗಾವಿಯ ನಗರ ಸಾರಿಗೆ ಬಸ್ ನಿಲ್ದಾಣದ ಆವರಣದ ಸ್ವೀಟ್ ಮಾರ್ಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸೋಮವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ಕೆಲ ಹೊತ್ತು ಆತಂಕ ಸೃಷ್ಟಿಸಿತ್ತು.

ದ್ವಿಚಕ್ರವಾಹನ ಪಾರ್ಕಿಂಗ್ ಪಕ್ಕದ ಸ್ವೀಟ್ ಮಾರ್ಟ್ ಗೆ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಏಕಾಏಕಿ ಬೆಂಕಿ ಹತ್ತಿಕೊಂಡು ಅಂಗಡಿಯಲ್ಲಿದ್ದ ಕೆಲ ವಸ್ತುಗಳಿಗೆ ಹೊತ್ತಿಕೊಳ್ಳುತ್ತಿದ್ದಂತೆ ಬೆಂಕಿ ತಗಳಿದ ವಸ್ತುಗಳನ್ನು ಹೊರ ಚೆಲ್ಲಲಾಯಿತು ತಕ್ಷಣವೇ ಅಂಗಡಿಕಾರರು ಪೊಲೀಸ್ ಸಿಬ್ಬಂದಿ ಹಾಗೂ ಆಟೋ ಚಾಲಕರು ಇನ್ನಿತರರು ಸೇರಿ ನೀರು ಹಾಕಿ ಬೆಂಕಿಯನ್ನು ತಹಬದಿಗೆ ತಂದಿದ್ದರಿಂದ ಭಾರಿ ಪ್ರಮಾಣದ ದುರ್ಘಟನೆ ತಪ್ಪಿದೆ. ಕೆಲ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಹಾನಿಯುಂಟಾಗಿದೆ

Tags:

error: Content is protected !!