Belagavi

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿನ ಏಜೆಂಟರ ಹಾವಳಿಯನ್ನು ತಪ್ಪಿಸಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Share

ಬೆಳಗಾವಿ ಸವದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿ ಎಜೆಂಟರ್ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಮಂಗಳವಾರ ಜಯಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯ ಸವದತ್ತಿ ಯಲ್ಲಮ್ಮನ ದೇವಸ್ಥಾನ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸರಕಾರದ ಅಧಿನದಲ್ಲಿದ್ದರೂ ಸುಧಾರಣೆ ಮಾತ್ರವಾಗಿಲ್ಲ. ವಿಪರೀತವಾಗಿ ಏಜೆಂಟರ್ ಹಾವಳಿ ಹೆಚ್ವಾಗಿದೆ. ಇದ‌ನ್ನು‌ ತಡೆಗಟ್ಟಬೇಕೆಂದು ಆಗ್ರಹಿಸಿದರು. ಯಲ್ಲಮ್ಮ ದೇವಿಯ ವಿಶೇಷ ದರ್ಶನ ಎಂದು ಒಬ್ಬರಿಗೆ 100 ಹಾಗೂ500 ರೂ.ಗಳವರೆಗೆ ಏಜೆಂಟರು ದರ ನಿಗದಿ ಪಡಿಸಿದ್ದಾರೆ. ಆದರೆ ಬೇರೆ‌ ರಾಜ್ಯದ ಭಕ್ತರು ಬೆಳಗ್ಗೆ 11ಗಂಟೆಗೆ ಸರದಿ ಸಾಲಿನಲ್ಲಿ‌ ನಿಂತರೂ ದೇವಿಯ ದರ್ಶನಕ್ಕೆ ಅನುಕೂಲ ಮಾಡಿಕೊಡುತ್ತಿಲ್ಲ. ಬೇಕಾಬಿಟ್ಟಿಯಾಗಿ ಭಕ್ತರ ಸುಲಿಗೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶಿವರಡ್ಡಿ ಹುಚ್ಚರಡ್ಡಿ, ಸುನಿಲ್ ‌ನಾಯಕ, ದುಂಡಪ್ಪ ಸವದತ್ತಿ, ಸುಜಾತಾ ಜಾಧವ, ಸವಿತಾ ಶಿಂಧೆ, ಸುಜಾತಾ ಸಾವಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!