ಬೆಳಗಾವಿ: ಬೆಳಗಾವಿಯ ಗೌರಿ ಮಹಿಳಾ ಮಂಡಳದ ವತಿಯಿಂದ ನವರಾತ್ರಿಯ ನಿಮಿತ್ಯ ದಾಂಡಿಯಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಸದಾಶಿವನಗರದ ಗೌರಿ ಮಹಿಳಾ ಮಂಡಳದ ವತಿಯಿಂದ ನವರಾತ್ರಿಯ ನಿಮಿತ್ಯ ಮಹಿಳೆಯರಿಗಾಗಿ ದಾಂಡಿಯಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷೆ ಗೀತಾ ಸುತಾರ ಅವರು ದಾಂಡಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜಯಶ್ರೀ ಕರ್ಹಾಡಕರ, ಉಪಾಧ್ಯಕ್ಷರಾದ ಪ್ರೇಮಾ ಎತ್ತಿನಮನಿ, ಕಾರ್ಯದರ್ಶಿ ಸುಜಾತಾ ಗೋಕಾಕ್ ಇನ್ನುಳಿದವರು ಉಪಸ್ಥಿತರಿದ್ಧರು. ಮಹಿಳೆಯರು ದಾಂಡಿಯಾ ಹಾಡುಗಳಿಗೆ ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದರು.
ದಾಂಡಿಯಾ ಕಾರ್ಯಕ್ರಮದ ಯಶಸ್ಸಿಗೆ ಸವೀತಾ ಪಾಟೀಲ, ಧನಶ್ರೀ ಕುಲಕರ್ಣಿ, ಸ್ನೇಹಲ್ ಕಾಳಭೈರವ, ಶಿಲ್ಪಾ ವಾಗರಾಳಿ, ಕಮಲಾ ಯಡಳ್ಳಿ, ಅನೀತಾ ಪಾಟೀಲ, ಶಶಿಕಲಾ ಜಗಜಂಪಿ ಸೇರಿದಂತೆ ಇನ್ನುಳಿದ ಸದಸ್ಯರು ಭಾಗಿಯಾಗಿದ್ಧರು.