ಕೆಲಸದಲ್ಲಿ ತಾಳ್ಮೆ ಸಮಯಪ್ರಜ್ಞೆ ಶಿಸ್ತು ಎಲ್ಲವನ್ನು ಕಲಿತಿರಬೇಕು ಅಂದಾಗ ಮಾತ್ರ ಯಶಸ್ಸಿನ ಹಾದಿ ಹಿಡಿಲು ಸಾಧ್ಯ ಎಂದು ಹಿರಿಯ ಪತ್ರಿಕಾ ಛಾಯಾಗ್ರಾಹಕ ಪಿಕೆ ಬಡಿಗೇರ್ ಹೇಳಿದ್ದರು .
ಬೆಳಗಾವಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಸಭಾಭವನದಲ್ಲಿ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ ಸಮಾರೋಪ ಸಮಾರಂಭದ ಕಾರ್ಯಕ್ರಮಕ್ಕೆ ಹಿರಿಯ ಪತ್ರಿಕಾ ಛಾಯಾಗ್ರಾಹಕ ಶ್ರೀ ಪಿಕೆ ಬಡಿಗೇರ್ ರವರು ಕಾರ್ಯಕ್ರವನ್ನು ಉದ್ಘಾಟಿಸಿದರು .ತರಬೇತಿದಾರರು ತೆಗೆದ ಛಾಯಾಚಿತ್ರ ಪ್ರದರ್ಶನವನ್ನು ಮಾಡಲಾಯಿತು .
ಹಿರಿಯ ಪತ್ರಿಕಾ ಛಾಯಾಗ್ರಾಹಕ ಪಿಕೆ ಬಡಿಗೇರ್ ಮಾತನಾಡಿ ಇವತ್ತಿನ ದಿನ ಫೋಟೋಗ್ರಾಫಿ ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಕಾರಣ ತಾವುಗಳು ತರಬೇತಿಯಲ್ಲಿ ಪಡೆದ ಕೌಶಲ್ಯಗಳ ಸದುಪಯೋಗ ಪಡೆಸಿಕೊಳ್ಳಿ ಎಂದು ತಿಳಿಸಿದರು ಮತ್ತು ಮುಂದಿನ ದಿನಗಳಲ್ಲಿ ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ ಇನ್ನೂಹೆಚ್ಚಿನ ಬದಲಾವಣೆಗಳು ಬರಲಿದ್ದು ಅದೆಲ್ಲವನ್ನು ಎದುರಿಸಲು ತಾವುಗಳು ಕಾರ್ಯಪ್ರವೃತ್ತರಾಗಿರಿ ಎಂದು ತಿಳಿಸಿದರು


ನಾಗರಾಜ್ ಎಸ್ ದಸಮನಿ ಮಾತನಾಡಿ ಇಲ್ಲಿ ಕಲಿತಿರುವ ತರಬೇತಿಯನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿಕೊಂಡು ಮುಂದೆ ಸಾಗಿರಿ ಜೊತೆಗೆ ಉದ್ಯೋಗದಲ್ಲಿ ಯಶಸ್ವಿಯಾಗಿರಿ ಎಂದು ಶುಭ ಹಾರೈಸಿದರು .
ಪ್ರವೀಣ್ ಕೆ ಎಸ್ ಮಾತನಾಡಿ ನೀವೆಲ್ಲರೂ ತರಬೇತಿಯನ್ನು ಪಡೆದಿರುವಿರಿ ಆದರೆ ಕಲಿಕೆ ಇಲ್ಲಿಗೆ ಮುಕ್ತಾಯವಲ್ಲ ಕಲಿಕೆಯು ನಿರಂತರವಾಗಿರಲಿ ಅಂದಾಗ ಮಾತ್ರ ನೀವು ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು

