yargatti

ಸತ್ತಿಗೇರಿ ಗ್ರಾಮದಲ್ಲಿ ಭಕ್ತಿಯಿಂದ ಜರುಗಿದ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ

Share

ಸದ್ದರ್ಮ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಸತ್ತಿಗೇರಿ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿತು.

ಕುರುಬಗಟ್ಟಿ ಕ್ರಾಸ್ ದಿಂದ ಆರಂಭಗೊಂಡ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಶ್ರೀ ಮಳಿಮಲೇಶ್ವರ ಮಠದ ವರೆಗೂ 1008 ಪೂರ್ಣ ಕುಂಭ ಸಮೇತ ಜರುಗಿತು. ಕುಂಭ ಹೊತ್ತು ಆರತಿ ಹಿಡಿದು ಹೆಜ್ಜೆ ಹಾಕಿದ ಮಹಿಳೆಯರು ಅಡ್ಡ ಪಲಕ್ಕಿ ಮಹೋತ್ಸವ ಮೆರುಗು ಹೆಚ್ಚಿಸಿದ್ದರು.

ರಸ್ತೆಯುದ್ದಕ್ಕೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು ಹಾಗೂ ಕರಡಿ ಮಜಲು, ಜಗ್ಗಲಗಿ ಮೇಳ, ಮಹಿಳಾ ಡೊಳ್ಳು ಕುಣಿತ, ಕುದುರೆ ಸಾರೋಟು, ವೀರಗಾಸೆ ಕುಣಿತದ, ಆನೆ ಅಂಬಾರಿ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾಮೇಳ ಶ್ರೀಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಆಗಮನದ ವೇಳೆ ಭಕ್ತರು ಶ್ರದ್ಧಾ ಭಕ್ತಿಯಿಂದ ಶ್ರೀಗಳನ್ನು ಬರಮಾಡಿಕೊಂಡರು.

ಈ ವೇಳೆ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಣಬರಟ್ಟಿ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಕಟಕೋಳ-ಎಂ.ಚಂದರಗಿ ವೀರಭದ್ರ ಶಿವಯೋಗಿ ಶಿವಾಚಾರ್ಯರು ಸ್ವಾಮೀಜಿ, ಭಾಗೋಜಿಕೊಪ್ಪ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಸತ್ತಿಗೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸವದತ್ತಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಗ್ರಾಮಸ್ಥರು ಇದ್ದರು.

ವರದಿ ಈರಣ್ಣಾ ಹೂಲ್ಲೂರ ಯರಗಟ್ಟಿ

Tags:

error: Content is protected !!