Vijaypura

ಪರಿಸರ ಸ್ನೇಹಿ ಗಣೇಶನಿಗೆ ಪರಿಸರ ಸ್ನೇಹಿ ಆಟೋ ಸಾಥ್ ನೀಡೊ ಮೂಲಕ ಪರಿಸರ ಜಾಗೃತಿ

Share

ವಿಜಯಪುರ ನಗರದಲ್ಲಿ ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತ ಗಜಾನನ ಮಹಾಮಂಡಳದ ವತಿಯಿಂದ ಉಚಿತ ಮಣ್ಣಿಗ ಗಣಪತಿ ಮೂರ್ತಿ ವಿತರಿಸಲಾಗುತ್ತಿದೆ. ಬ್ಯಾಟರಿ ಚಾಲಿತ ಆಟೋದವರು ಕೂಡಾ ಮಣ್ಣಿನ ಗಣಪತಿ ತೆಗೆದುಕೊಂಡು ಹೋಗುವ ಭಕ್ತರ ಮನೆಗಳಿಗೆ ಕನಿಷ್ಠ ದರದಲ್ಲಿ ತಲುಪಿಸಲು ಸೇವೆ ಮಾಡಲು ಮುಂದೆ ಬಂದಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಗಣೇಶ ಇನ್ನೇನೂ ಮನೆ ಮನೆಗೆ ಆಗಮಿಸಲಿದ್ದು ಭಕ್ತರ ಸಡಗರ ಹೆಚ್ಚಿದೆ. ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಪರಿಸರ ಸ್ನೇಹಿ ಗಣೇಶನಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇನ್ನೂ ಗಣೇಶನನ್ನು ಮನೆಗೆ ತೆಗೆದುಕೊಂಡು ಹೋಗಲು ಆಟೋ ಬೇಕೆ ಬೇಕು. ಒಂದು ಮನೆಯಿಂದ ೪ ರಿಂದ ಐದು ಜನ ಬಂದು ಗಣೇಶನನ್ನು ಪ್ರತಿಷ್ಠಾಪನೆ ಮಾಡೊದು ವಾಡಿಕೆ. ಇಂತಹ ಸಮಯದಲ್ಲಿ ಆಟೋ ಚಾಲಕರು ಪಿಕ್ ಅಪ್ ಹಾಗ ಡ್ರಾಪ್ ಗೆ ಕನಿಷ್ಠ 150 ರಿಂದ 250 ರವರೆಗೆ ಚಾರ್ಜ್ ಮಾಡ್ತಿದ್ದರು.

ಪರಿಸರ ಸ್ನೇಹಿ ಗಣಪನ ಮೂರ್ತಿ ತೆಗೆದುಕೊಂಡು ಹೋಗುವವರಿಗೆ ಪ್ರೋತ್ಸಾಹಿಸಲು ನಮ್ಮ ಆಟೋ ಕಂಪನಿ ಮುಂದೆ ಬಂದಿದ್ದು. ಪಿಕ್ ಅಪ್ ಆ್ಯಂಡ್ ಡ್ರಾಪ್ ಮಾಡಲು ಕೇವಲ 70 ರೂ ಫಿಕ್ಸ್ ಮಾಡಿದ್ದಾರೆ. ಇನ್ನೂ ನಗರದ ಯಾವುದೇ ಮೂಲೆಯಲ್ಲಿ ಮನೆ ಇದ್ರೂ ಪಿಕ್ & ಡ್ರಾಪ್ ಮಾಡಲಿದ್ದಾರೆ. ತಮ್ಮ ಕಂಪನಿ ವತಿಯಿಂದ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡುವವರ ಸಂಖ್ಯೆ ಹೆಚ್ಚಾಗಲಿ ಅನ್ನೋ ದೃಷ್ಟಿಯಿಂದ ಈ ಭಕ್ತರಿಗೆ ಈ ಸೇವೆ ಕೊಡಲಿದ್ದಾರೆ.

ಇನ್ನೂ ಪರಿಸರದ ಕುರಿತು ಜಾಗೃತಿ ಮೂಡಿಸಲು ಗಜಾನನ ಮಹಾಮಂಡಳದ ವತಿಯಿಂದ ಸಾವಿರಾರು ಮಣ್ಣಿಗ ಗಣಪತಿ ಮೂರ್ತಿ ವಿತರಿಸಲಾಗುತ್ತಿದೆ. ಇವರ ಈ ಸೇವೆಗೆ ಸಾಥ್ನೀಡಲು ಈ ನಗರದಲ್ಲಿನ ನಮ್ಮ ಆಟೋ ಕಂಪನಿ ಬ್ಯಾಟರಿ ಚಾಲಿತ 15 ಆಟೋಗಳು ಕಾರ್ಯನಿರ್ವಹಿಸಲಿವೆ. ಇನ್ನೂ ಇವತ್ತಿನಿಂದಲೇ ವಿಜಯಪುರ ನಗರದ ಜನತೆ ಇದರ ಸದುಪಯೋಗ ಪಡೆದು ಕೊಳ್ಳುತ್ತಿದ್ದಾರೆ. ಆಟೋ ಚಾಲಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಪರಿಸರ ಸ್ನೇಹಿ ಗಣೇಶನಿಗೆ ಪರಿಸರ ಸ್ನೇಹಿ ಆಟೋ ಸಾಥ್ ನೀಡಿ ಪರಿಸರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗತೊಡಗಿದೆ.

Tags:

error: Content is protected !!