hubbali

ಟ್ವಿಟರ್‌ನಲ್ಲಿ ಕೇಂದ್ರ ಸಚಿವ ಗಡ್ಕರಿಗೆ ತಲುಪಿದ MK ಹುಬ್ಬಳ್ಳಿ ಹೆದ್ದಾರಿ ಅವಾಂತರ: ಕಣ್ಣಿದ್ದೂ ಕುರುಡಾದರೇ ಗುತ್ತಿಗೆದಾರರು?

Share

ರಾಷ್ಟ್ರೀಯ ಹೆದ್ದಾರಿಯ ನಿರ್ವಹಣಾ ಕಣ್ಗಾವಲು ವಹಿಸಬೇಕಾದ ಗುತ್ತಿಗೆದಾರರು ಕಣ್ಣಿದ್ದೂ ಕುರುಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ MK ಹುಬ್ಬಳ್ಳಿ ಪಟ್ಟಣದ ಸರ್ವಿಸ್ ರಸ್ತೆಗಳು ಈಗ ಸಾವು-ಬದುಕಿನ ಆಕ್ಸಿಡೆಂಟ್ ಜೋನ್‌ಗಳಾಗಿ ಬದಲಾಗಿದ್ದು,ಬಸವರಾಜ್ ಎಂಬುವವರು ಈ ಕರಾಳ ಸತ್ಯವನ್ನು ಕೇಂದ್ರ ಸಾರಿಗೆ ಸಚಿವರ ಅಧಿಕೃತ ಖಾತೆಗೆ ಟ್ವೀಟ್ ಮಾಡುವ ಮೂಲಕ ದೆಹಲಿ ಮಟ್ಟದಲ್ಲಿ ಬೆಳಕು ಚೆಲ್ಲಿದ್ದಾರೆ.

ಹಿರೇಬಾಗೇವಾಡಿ ಟೋಲ್ ವ್ಯಾಪ್ತಿಯ MK ಹುಬ್ಬಳ್ಳಿ ಹಾಗೂ ಹಿರೇಬಾಗೇವಾಡಿ ಪಟ್ಟಣಗಳ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಬೃಹತ್ ತಗ್ಗು ಗುಂಡಿಗಳಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಪ್ರಸ್ತುತ ಮಳೆಗಾಲವಾಗಿರುವುದರಿಂದ ಈ ಗುಂಡಿಗಳಲ್ಲಿ ನೀರು ತುಂಬಿಕೊಂಡು ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಏಳುತ್ತಿದ್ದು, ಸಂಬಂಧಪಟ್ಟ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, MK ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಹೆದ್ದಾರಿ ನಿರ್ವಹಣಾ ಇಂಜಿನಿಯರ್‌ಗಳನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಗಮನಕ್ಕೆ ತಂದಿದ್ದಷ್ಟೇ ಅಲ್ಲದೆ, ಈ ಗ್ರೌಂಡ್ ರಿಪೋರ್ಟ್ ಅನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಅಧಿಕೃತ ಟ್ವಿಟರ್ (X) ಖಾತೆಗೆ ನೇರವಾಗಿ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಇಷ್ಟೆಲ್ಲಾ ಆದ ಮೇಲಾದರೂ ಈ ಜೀವಹಿಂಡುವ ರಸ್ತೆಗಳಿಗೆ ಮುಕ್ತಿ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!