Belagavi

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿ: ಡಾಜಗಜಂಪಿ

Share

ಶಿಕ್ಷಕ ವೃತ್ತಿಯಲ್ಲಿ ಸಂತೃಪ್ತಿ ಕಾಣುವ ಅವಕಾಶವಿದೆ. ಪರಮ ಪೂಜ್ಯನೀಯ ಕಾಯಕ ಯಾವದಾದರೂ ಇದ್ದರೆ ಅದು ಶಿಕ್ಷಕ ವೃತ್ತಿ ಮಾತ್ರ ಎಂದು ಡಾಜಗಜಂಪಿ ಹೇಳಿದರು.

ನಿನ್ನೆ ಶನಿವಾರದಂದು ಹುದಲಿಯ ದೇಶಪಾಂಡೆ ಭವನದಲ್ಲಿ 1972 ನೆಯ ಸಾಲಿನ ಎಸ್.ಎ.ಹಾಯಸ್ಕೂಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ಶಿಷ್ಯರ ಸಮ್ಮೀಲನದ ಹೃದಯಸ್ಪರ್ಶಿ ಗುರು ವಂದನಾ ಹಾಗೂ ಗೌರವ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

:ಡಾ. ಬಸವರಾಜ ಜಗಜಂಪಿ ಅವರು ಮಾತನಾಡಿಶಿಕ್ಷಕ ವೃತ್ತಿಯಲ್ಲಿ ಸಂತೃಪ್ತಿಕಾಣುವಅವಕಾಶವಿದೆ. ಪರಮ ಪೂಜ್ಯನೀಯಕಾಯಕಯಾವದಾದರೂಇದ್ದರೆಅದು ಶಿಕ್ಷಕ ವೃತ್ತಿ .ಪ್ರೇಮ ಹಾಗೂ ಸಮರ್ಪಣಾ ಮನೋಭಾವದಿಂದ ವಿದ್ಯರ್ಥಿಗಳಲ್ಲಿಯ ಪ್ರತಿಭೆಯನ್ನು ಹೆಕ್ಕಿ ತೆಗೆದು ಪೂರಕವಾಗಿ ಪೆÇೀಷಣೆಯ ನೀಡುವದು ಶಿಕ್ಷಕನಾದವರಲ್ಲಿ ಇರಬೇಕಾದಪ್ರಮುಖಗುಣವಾಗಿದೆ. ಡಾ.ಎ.ಪಿ.ಜೆ.ಕಲಾಂ, ಡಾ.ರಾಧಾಕೃಷ್ಣನ್‍ರವರಂತ ಮಹಾನ ಶಿಕ್ಷಕರು ಆಗಿ ಹೋಗಿದ್ದಾರೆ.ಅಮೇರಿಕಾ ಪ್ರವಾಸದ ವೇಳೆಅಲ್ಲಿಯ ಶಾಲಾ ಕಾಲೇಜುಗಳಿಗೆ ಭೇಟಿನೀಡಿದಾಗಅಲ್ಲಿಯ ವಿದ್ಯಾರ್ಥಿಗಳು ಭಾರತೀಯ ಶಿಕ್ಷಕರನ್ನು ಇಷ್ಟ ಪಡುತ್ತಾರೆಅನ್ನುವುದುಕೂಡ ಬಹು ಹೆಮ್ಮೆಯ ಸಂಗತಿ.

ಡಾ. ಅಬ್ದುಲ್‍ಕಲಾಂರವರುರಾಷ್ಟ್ರಪತಿ ಹುದ್ದೆಯಿಂದ ನಿವೃತ್ತಿಯಾದ ಮರುದಿನವೇ ಚನ್ನೈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದು ಶ್ಲಾಘನೀಯ.”ನನ್ನನ್ನುಎಂದೂ ಮಾಜಿರಾಷ್ಟ್ರಪತಿಅಂತಾಕರೆಯದೇ ನನ್ನನ್ನು ಫೆÇ್ರೀಫೆಸರಅಂತಾ ಮಾತ್ರಕರೆಯಿರಿ”ಎಂದು ಕಲಾಂ ಅವರು ಹೇಳಬೇಕಾದರೆ,ಶಿಕ್ಷಕರ ಸ್ಥಾನ ಶ್ರೇಷ್ಠ ವಾದದ್ದುಎಂದು ಅರಿತಕೊಳ್ಳಬೇಕಾದ ಅವಶ್ಯಕತೆಇದೆ.ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವಾಣಿಜ್ಯೀಕರಣವಾಗುತ್ತಿರುವದು ವಿμÁದನೀಯ ಸಂಗತಿಎಂದರು.

ಎಸ್.ಎ.ಭಾವಿಕಟ್ಟಿ,ಎಸ್.ವಾಯ್.ಪಾಟೀಲ, ಆರ್.ಬಿ.ಪಾಟೀಲ, ಮತ್ತು ಬಿ.ವಿ. ಗುಂಜಿಕರ ಶಿಕ್ಷಕರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಎಸ್.ಎ.ಭಾಂವಿಕಟ್ಟಿ, ಎಸ್ ವಾಯ್ .ಪಾಟೀಲ ಹಾಗೂ ಬಿ.ವಿ.ಗುಂಜಿಕರ ಗುರುಗಳು ಗುರು ಪರಂಪರೆಕುರಿತು ವಿವರಿಸಿ, ಸಂಧ್ಯಾಕಾಲದಜೀವನದಕುರಿತು ಮಾರ್ಗದರ್ಶನ ನುಡಿಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಕಳೆದ ಐವತ್ತು ವರ್ಷಗಳಿಂದ ಹುದಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಆರೋಗ್ಯ ಸಂರಕ್ಷಣೆಯಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ ಡಾ.ಎಸ್‍ಆರ್.ಭಗತಅವರಿಗೆ ” ವೈದ್ಯ ಸೇವಾ ಪುರಸ್ಕಾರ ಪ್ರಶಸ್ತಿಯನ್ನು ” ನೀಡಿಗೌರವಿಸಲಾಯಿತು. ಅನ್ನಪೂರ್ಣ ಹಿರೇಮಠಅವರನ್ನು ಮಹಿಳೆಯರ ಸಬಲೀಕರಣದಲ್ಲಿಯಅವರ ಅನುಪಮ ಸೇವೆ ಗುರುತಿಸಿ ಗೌರವಿಸಲಾಯಿತು.

ಈ ವೇಳೆ ಡಾ. ಎಸ್.ಆರ್.ಭಗತರವರು ಸಮಾರಂಭದಅಧ್ಯಕ್ಷತೆಯನ್ನು ವಹಿಸಿದ್ದರು.ವಾಸು ಹರದಿ,ಧನಂಜಯಕಾಕತೀಕರ,ಬಸವರಾಜ ವಕ್ಕುಂದ,ರಾಜುಚಿನ್ನನ್ನವರ,ಬಸನ್ನಾಕೊಪ್ಪದ, ಮಹಾದೇವ ವಕ್ಕುಂದ,ವಸಧಾಕುಲಕರ್ಣಿ, ಶಾರದಾದೇಶಪಾಂಡೆ, ಬಸವರಾಜ ಹಿರೇಮಠ, ಗಿರೀಶಕುಲಕರ್ಣಿ ನಿಪ್ಪಾನಿ,ಅಕ್ಕುತಾಯಿಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!