Education

ಗುಮ್ಮಟನಗರಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಡಬಲ್ ಟು ಡಬಲ್

Share

ಕೊರೊನಾ ಅಬ್ಬರದಿಂದ ಮುಚ್ಚಿದ ಶಾಲೆಗಳು ಪುನರಾರಂಭವಾಗಿ ಒಂದು ತಿಂಗಳಾಯ್ತು. ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲರವ ಕೇಳಿ ಬರುತ್ತಿದೆ‌. ಕೊರೋನಾ ಗಿದ್ದ ಭಯ ಮಾಯವಾಗತೊಡಗಿದೆ. ಶಾಲೆಗಳಲ್ಲಿ ಈಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗತೊಡಗಿ ಡಬ್ ಟು ಡಬಲ್ ಆಗತೊಡಗಿದೆ.. ಈ ಕುರಿತು ಇಲ್ಲಿದೆ ಡಿಟೇಲ್ಸ್

ಕೊರೊನಾ ಹೆಮ್ಮಾರಿ ನರ್ತನಕ್ಕೆ ದೇಶದಾದ್ಯಂತ ಲಾಕ್ ಡೌನ್ ಬಳಿಕ ಶಾಲೆಗಳು ಪ್ರಾರಂಭಕ್ಕೆ ಪರ ವಿರೋಧ ವ್ಯಕ್ತವಾಯಿ ತಾದರೂ ಸರಕಾರ ಕಳೆದ ಜನೇವರಿ ೨ ರಿಂದ ೬ ರಿಂದ ೧೦ ನೇ ತರಗತಿ ಕ್ಲಾಸ್ ಗಳು ಪ್ರಾರಂಭವಾಗಿವೆ. ಗುಮ್ಮಟನಗರಿ ವಿಜಯಪುರ ದಲ್ಲಿ ಶಾಲೆಗಳು ಪ್ರಾರಂಭವಾಗಿ ಒಂದು ತಿಂಗಳು ಪೂರೈಸಿವೆ. ಕೊರೊನಾ ಮತ್ತೆ ವಕ್ಕರಿಸುವ ಬಗ್ಗೆ ಇದ್ದ ಭಯ ಮಾಯ ವಾಗಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಆಗಮಿ ಸುತ್ತಿದ್ದಾರೆ.

ತಮ್ಮ ತರಗತಿಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಕುಳಿತು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಇತ್ತ ಶಿಕ್ಷಕರು ಕೂಡ ವಿದ್ಯಾರ್ಥಿ ಗಳಿಗೆ ಅಭ್ಯಾಸ ಮನದಟ್ಟು ಮಾಡುವ ಕಾಯಕದಲ್ಲಿ ಬಿಜಿಯಾಗಿದ್ದಾರೆ.

ಕಳೆದ ಜನೇವರಿ ಒಂದನೇ ವಾರದಲ್ಲಿ ಭಯದಿಂದಲೇ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದು ಕಂಡು ಬಂದಿತ್ತು. ಹೀಗಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.೩೦ ರಿಂದ ೪೦ ರಷ್ಟು ಇತ್ತು. ಹೀಗಾಗಿ ಶಾಲೆಗಳು ನಡೆಯು ತ್ತವೆಯಾ ಅನ್ನೋದು ಡೌಟ್ ಇತ್ತು. ಹದಿನೈದು ದಿವಸ ವಾದರೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರಲಿಲ್ಲ. ಆದ್ರೆ ಸಂಕ್ರಾಂತಿ ಮುಗಿದ ಬಳಿಕ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಡಬಲ್ ಆಗಿದೆ‌. ಸದ್ಯ ಶೇ.೭೫ ರಿಂದ ೮೫ ರಷ್ಟು ಹೆಚ್ಚಾಗಿ ವಿದ್ಯಾರ್ಥಿಗಳು ತರಗತಿ ಹಾಜರಾಗುತ್ತಿದ್ದಾರೆ.

ಇನ್ನೂ ಕೆಲ ಪಾಲಕರಲ್ಲಿ ಕೊರೊನಾ ಭಯ ಹೋಗಿಲ್ಲ ಹೀಗಾಗಿ ಒಂದಿಷ್ಟು ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುತ್ತಿಲ್ಲಾ, ಸರಕಾರದ ಮಾರ್ಗಸೂಚಿ ಯನ್ವವ ತರಗತಿ ಗಳು ನಡೆಯುತ್ತಿವೆ. ಇನ್ನೂ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಜ್ವರ ಬಂದ ವಿದ್ಯಾರ್ಥಿಗಳು ಅಥವಾ ಶಿಕ್ಷಕರನ್ನು ಶಾಲೆಯ ಒಳಗೆ ಪ್ರವೇಶ ನೀಡದೆ ಎಚ್ಚರಿಕೆ ವಹಿಸಲಾಗುತ್ತಿದೆ…

ಲಾಕ ಡೌನ್ ಬಳಿಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಮಂಕು ಕವಿದಿತ್ತು. ಜನೇವರಿ ೧ ರಿಂದ ಶಾಲೆಗಳು ಪ್ರಾರಂಭವಾಗಿದ್ದು ಸಂತಸ ತಂದಿದೆ. ಸರಕಾರ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮುನ್ನುಡಿ ಬರೆದಿದೆ. ಇನ್ನೂ ಶಾಲೆಗಳಲ್ಲಿ ನಮ್ಮ ಮಕ್ಕಳ ಆರೋಗ್ಯ ಸರಿ ಇಲ್ಲದೆ ಇದ್ದಲ್ಲಿ ಶಾಲೆಯಲ್ಲಿ ಪ್ರವೇಶ ನೀಡದೆ ಇತರೆ ವಿದ್ಯಾರ್ಥಿಗಳ ಆರೋಗ್ಯದ ಕಡೆಗೆ ಗಮನ ವಹಿಸಲಾಗುತ್ತಿದೆ ಎನ್ನುತ್ತಾರೆ ಪಾಲಕರು, ಅಲ್ಲದೇ ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡದೇ ಮನೆಯಲ್ಲಿ ಕುಳಿತು ಮೊಬೈಲ್, ಟಿವಿಗಳ ದಾಸರಾಗಿದ್ದರು ಈಗ ಶಾಲೆಗೆ ಹೋಗುತ್ತಿರಯವದ್ರಿಂದ ಅಭ್ಯಾಸದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ, ಇದು ನಮಗೆ ಖುಷಿ ತಂದಿದೆ ಎಂದು ಹರ್ಷ ಪಡಿಸುತ್ತಾರೆ ಪಾಲಕರು

ಒಟ್ನಲ್ಲಿ ಈ ವರ್ಷ ಶಾಲೆಗಳು ಪ್ರಾರಂಭ ವಾಗುವದೇ ಇಲ್ಲಾ ಎನ್ನೊ ಸ್ಥಿತಿಯಲ್ಲಿಯೇ ಶಾಲೆಗಳು ಪ್ರಾರಂಭವಾಗಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಹೆಚ್ಚಾಗುತ್ತಿರೋದು ಖುಷಿಯ ಸಂಗತಿ‌‌‌…

Tags:

error: Content is protected !!