Belagavi

ಬ್ರಾಹ್ಮಣ‌ ಸಮಾಜದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ

Share

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳ ನೆರವಿಗೆ ಬದ್ಧ ಎಂದು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಹೇಳಿದರು.
ಬೆಳಗಾವಿ ನಗರದ ಉದ್ಯಮಬಾಗದಲ್ಲಿರುವ ಫೌಂಡ್ರಿ ಕ್ಲಸ್ಟರ್ ನಲ್ಲಿ ಟ್ರಸ್ಟ್ ವತಿಯಿಂದ ಆಯೋಜಿಸಿದ ಬ್ರಾಹ್ಮಣ‌ ಸಮಾಜದ ವಿದ್ಯಾರ್ಥಿಗಳಿಗೆ ಧನ ಸಹಾಯದ ಚೆಕ್ ವಿತರಿಸಿ ಅವರು ಮಾತನಾಡಿದರು. ಬ್ರಾಹ್ಮಣ ಸಮಾಜ ಟ್ರಸ್ಟ್ ಆಶಯದಂತೆ ನಾವು ನಡೆದುಕೊಳ್ಳುತ್ತಿದ್ದೇವೆ‌.

ವಿದ್ಯಾಭ್ಯಾಸಕ್ಕಾಗಿ ಆರ್ಥಿಕವಾಗಿ ಸಹಾಯ ಕೇಳಿ ಬಂದವರಿಗೆಲ್ಲ ಟ್ರಸ್ಟ್ ವತಿಯಿಂದ ನೆರವು ನೀಡಲಾಗಿದೆ. ಇನ್ನು ಮುಂದೆ ಕೂಡ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಾವು ಎಲ್ಲ ರೀತಿಯ ನೆರವು ಕಲ್ಪಿಸಿ ಕೊಡುತ್ತೇವೆ ವಿಶ್ವಾಸ ವ್ಯಕ್ತಪಡಿಸಿದರು.

ಬ್ರಾಹ್ಮಣರು ಇನ್ನಷ್ಟು ಸಂಘಟಿತರಾಗಬೇಕಾದ ಅವಶ್ಯಕತೆಯಿದೆ. ಈ‌ ನಿಟ್ಟಿನಲ್ಲಿ ಎಲ್ಲರೂ ಬ್ರಾಹ್ಮಣ ಸಮಾಜ ಟ್ರಸ್ಟ್ ಜೊತೆ ಕೈ ಜೋಡಿಸಬೇಕು ಎಂದು ಕೇಳಿಕೊಂಡರು.
ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜ ಟ್ರಸ್ಟ ವತಿಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವಿನ ಚೆಕ್ ನೀಡಲಾಯಿತು.
ಟ್ರಸ್ಟ್ ಕಾರ್ಯದರ್ಶಿ ವಿಲಾಸ ಬಾದಾಮಿ, ಸಹ ಕಾರ್ಯದರ್ಶಿ ವಿಲಾಸ ಜೋಶಿ, ಖಜಾಂಚಿ ರಮೇಶ್ ಕುಲಕರ್ಣಿ, ನಗರಸೇವಕಿ ವಾಣಿ ಜೋಶಿ, ಮಾಜಿ ನಗರಸೇವಕಿ ಅನುಶ್ರೀ ದೇಶಪಾಂಡೆ ಮುಂತಾದವರು ಹಾಜರಿದ್ದರು.

Tags:

error: Content is protected !!