Dharwad

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಧಾರವಾಡ ಸಂಚಾರಿ ಠಾಣೆ ಎಎಸ್‌ಐ‌ರಿಂದ ಸನ್ಮಾನ್.

Share

ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ, ಧಾರವಾಡ ಸಂಚಾರಿ ಠಾಣೆಯ ಎಎಸ್‌ಐ ಅವರು ಸನ್ಮಾನ ಮಾಡಿ ಗೌರವಿಸಿದರು.

ನಗರದ ಹೊಸಾಯಲ್ಲಾಪುರದ ಪ್ರಣವ ಅಜಿತ ನರಗುಂದಕರ ಶೇಕಡಾ 91 % ಮಾಡಿದ್ದು, ಮನ್ವಿತಾ ಕಲಾಲ ಶೇಕಡಾ 94 % ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ಸಂಚಾರಿ ಠಾಣೆ ಎಎಸ್‌ಐ ವಿರೇಶ ಬಳ್ಳಾರಿಯವರು ಸ್ವತಃ ಸ್ಟೂಡೆಂಟ್ಸ್ ಮನೆಗೆ ಭೇಟಿ ನೀಡಿ ಶಾಲು ಹಾಕಿ ಸನ್ಮಾನ ಮಾಡಿದ್ದಾರೆ.

ಧಾರವಾಡ ಸಂಚಾರಿ ಠಾಣೆಯ ಎಎಸ್‌ಐ ಅಧಿಕಾರಿ ವಿರೇಶ ಬಳ್ಳಾರಿಯವರು ಈ ಕಾರ್ಯಕ್ಕೆ ಶ್ಲಾಘನೀಯವಾಗಿದೆ. ಪೊಲೀಸರು ಅಂದ್ರೆ ಕೇವಲ ಠಾಣೆ, ದಂಡ, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದಕ್ಕೆ ಮಾತ್ರ ಸಿಮೀತವಾಗದೆ ವಿರೇಶ ಬಳ್ಳಾರಿಯವರು ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬೆನ್ನು ತಟ್ಟಿರುವುದು ಒಳ್ಳೆಯ ಸಂಗತಿಯಾಗಿದೆ‌.

Tags:

error: Content is protected !!