ಮಹಾರಾಷ್ಟ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕಬ್ಬಿನ ಬೆಂಬಲ ಬೆಲೆ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಪ್ರತಿ ಟನ್ ಕಬ್ಬಿಗೆ ೪,೨೦೦ ದರ ನಿಗದಿಪಡಿಸಿ ಮಹಾರಾಷ್ಟ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಕೊಲ್ಹಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದೀರ್ಘ ಹಾಗೂ ಮಹತ್ವದ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಸಚಿವ ಹಸನ್ ಮುಶ್ರಿಫ್ ಅವರು ಈ ಪ್ರಮುಖ ತೀರ್ಮಾನವನ್ನು ಪ್ರಕಟಿಸಿದರು.
ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಒಟ್ಟು ₹೪,೨೦೦ ಮೊತ್ತವನ್ನು ಮೂರು ಹಂತಗಳಲ್ಲಿ (ಕಂತುಗಳಲ್ಲಿ) ಪಾವತಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ:
ಮೊದಲ ಕಂತು:ಪ್ರತಿ ಟನ್ಗೆ ೩,೯೦೦,ಎರಡನೇ ಕಂತು ಪ್ರತಿ ಟನ್ಗೆ ೧೦೦೦,ಮೂರನೇ ಕಂತು ಪ್ರತಿ ಟನ್ಗೆ ೨೦೦೦ ನಿಡಲು ನಿರ್ಧರಿಸಲಾಗಿದೆ.
ಸಕ್ಕರೆ ಕಾರ್ಖಾನೆಗಳ ಮಾಲೀಕರು, ಆಡಳಿತ ಮಂಡಳಿ ಹಾಗೂ ರೈತ ಒಕ್ಕೂಟಗಳ ಮುಖಂಡರ ನಡುವೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯು ಸಂಪೂರ್ಣ ಯಶಸ್ವಿಯಾಗಿದೆ. ಎರಡೂ ಕಡೆಯವರ ವಾದ-ವಿವಾದಗಳನ್ನು ಆಲಿಸಿದ ನಂತರ ಈ ಒಮ್ಮತದ ದರವನ್ನು ನಿಗದಿಪಡಿಸಲಾಯಿತು.
ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಪರವಾಗಿ ರೈತ ಮುಖಂಡ ರಾಜು ಶೆಟ್ಟಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸರ್ಕಾರ ಹಾಗೂ ಕಾರ್ಖಾನೆಗಳ ಆಡಳಿತ ಮಂಡಳಿ ರೈತರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಬೆಲೆ ಏರಿಕೆ ಘೋಷಿಸಿರುವುದರಿಂದ, ರಾಜು ಶೆಟ್ಟಿ ಅವರು ತಮ್ಮ ಪ್ರತಿಭಟನೆಯನ್ನು ಅಧಿಕೃತವಾಗಿ ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ.
ಈ ನಿರ್ಧಾರದಿಂದಾಗಿ ಮಹಾರಾಷ್ಟ್ರದ ಲಕ್ಷಾಂತರ ಕಬ್ಬು ಬೆಳೆಗಾರರಲ್ಲಿ ಸಂತಸ ಮೂಡಿದ್ದು, ಕಬ್ಬು ನುರಿಸುವ ಹಂಗಾಮು ಸುಸೂತ್ರವಾಗಿ ಆರಂಭಗೊಳ್ಳಲು ಹಾದಿ ಸುಗಮವಾಗಿದೆ.
