Chikkodi

ಮಲಿಕವಾಡ – ದತ್ತವಾಡ ದೂಧಗಂಗಾ ನದಿ ಸೇತುವೆ ಮೇಲೆ ಬೃಹತ್‌ ಮೊಸಳೆ ಪ್ರತ್ಯಕ್ಷ; ಬೆಚ್ಚಿಬಿದ್ದ ಗ್ರಾಮಸ್ಥರು

Share

ತಾಲೂಕಿನ ಮಲಿಕವಾಡ – ದತ್ತವಾಡ ಗ್ರಾಮಗಳ ನಡುವೆ ಇರುವ ದೂಧಗಂಗಾ ನದಿಯ ಸೇತುವೆಯ ಮೇಲೆ ಇದ್ದಕ್ಕಿದ್ದಂತೆ ಬೃಹತ್‌ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಭೀತಿಯನ್ನು ಹುಟ್ಟುಹಾಕಿದೆ.

ನದಿಯಿಂದ ಹೊರಬಂದ ಸುಮಾರು ೮ ಅಡಿ ಉದ್ದದ ಬೃಹತ್‌ ಮೊಸಳೆ ಸೇತುವೆಯ ಮೇಲೆ ಕೆಲ ಕಾಲ ಕಾಣಿಸಿಕೊಂಡಿದೆ. ಈ ಮಾರ್ಗವಾಗಿ ಕಾರಿನಲ್ಲಿ ಸಂಚರಿಸುತ್ತಿದ್ದ ಚಾಲಕನೊಬ್ಬ ಮೊಸಳೆಯನ್ನು ಕಂಡು ತಕ್ಷಣವೇ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾನೆ. ಸೇತುವೆಯ ಮೇಲೆ ಮೊಸಳೆ ಸಂಚರಿಸುತ್ತಿರುವ ವಿಡಿಯೋ ಈಗ ಸ್ಥಳೀಯವಾಗಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ನಡುಕ ಹುಟ್ಟಿಸಿದೆ.

ದೂಧಗಂಗಾ ನದಿ ತೀರದ ಗ್ರಾಮಸ್ಥರು ನಿತ್ಯವೂ ಇದೇ ಸೇತುವೆಯ ಮೇಲೆ ಸಂಚರಿಸುವುದರಿಂದ, ಮೊಸಳೆ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರ ಹಾಗೂ ಜಾನುವಾರುಗಳ ಸುರಕ್ಷತೆಗೆ ದೊಡ್ಡ ಬೆದರಿಕೆಯಾಗಿದೆ.

ಸೇತುವೆ ಹಾಗೂ ನದಿ ತೀರದ ಸುತ್ತಮುತ್ತ ಮೊಸಳೆ ಸುಳಿದಾಡುತ್ತಿರುವುದರಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಮೊಸಳೆಯನ್ನು ಕಾರ್ಯಾಚರಣೆ ಮೂಲಕ ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಘಟನೆಯು ಸದಲಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Tags:

error: Content is protected !!