ಸಾಮಾನ್ಯ ಜನರಿಗೂ ಸುಲಭವಾಗಿ ನ್ಯಾಯ ಮತ್ತು ಕಾನೂನಿನ ಅರಿವು ಸಿಗುವಂತಾಗಲು ತಾಲೂಕು ಕಾನೂನು ಸೇವಾ ಪ್ರಾಧಿಕಾರ ವಿನೂತನ ಹೆಜ್ಜೆ ಇಟ್ಟಿದೆ. ಖಾನಾಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸಂಚರಿಸುವ ಇ-ಸೇವಾ ವಾಹನಕ್ಕೆ ನ್ಯಾಯಾಧೀಶರು ಹಸಿರು ನಿಶಾನೆ ತೋರಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಇ-ಕೋರ್ಟ್ಗಳ ಸಮಿತಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಖಾನಾಪುರ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ‘ನ್ಯಾಯ ಸೌಲಭ್ಯ ಈ ದಿನ ನಿಮ್ಮ ಬಾಗಿಲಿಗೆ’ ಎಂಬ ಇ-ಸೇವಾ ವಾಹನಕ್ಕೆ ಖಾನಾಪುರದಲ್ಲಿ ಚಾಲನೆ ನೀಡಲಾಯಿತು. ಹಿರಿಯ ಶ್ರೇಣಿ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ, ದಿವಾನಿ ನ್ಯಾಯಾಧೀಶರಾದ ದಾನಪ್ಪ ಹಾಗೂ 1ನೇ ಹೆಚ್ಚುವರಿ ನ್ಯಾಯಾಧೀಶರಾದ ನಯನಾ ಎಸ್. ಅಳವಂಡಿ ಅವರು ವಾಹನಕ್ಕೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿಸಿದರು.
ಈ ಇ-ಸೇವಾ ವಾಹನವು ಖಾನಾಪುರ ತಾಲೂಕಿನ ಹಲಕರ್ಣೆ, ರಾಮಗುರವಾಡಿ, ನಂದಗಡ, ಹೆಬ್ಬಾಳ ಹಾಗೂ ಹಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಲಿದೆ. ಈ ಸಂದರ್ಭದಲ್ಲಿ ಖಾನಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಈಶ್ವರ ಘಾಡಿ, ನ್ಯಾಯವಾದಿಗಳಾದ ಸಾಧೀಕ ನಂದಗಡಿ, ವಿ.ಎನ್. ಪಾಟೀಲ, ಸಿದ್ದಾರ್ಥ ಹೊಗಲ್ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
