Belagavi

ರಾಜ್ಯ ಮಟ್ಟದ ಸ್ಕೇಟಿಂಗ್‌ಗೆ ಬೆಳಗಾವಿಯ 55 ಪಟುಗಳ ಆಯ್ಕೆ

Share

ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 20ನೇ ಜಿಲ್ಲಾ ಸ್ಕೇಟಿಂಗ್ ಸ್ಪರ್ಧೆ ಹಾಗೂ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. 42ನೇ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಬೆಳಗಾವಿಯ 55 ಪ್ರತಿಭಾನ್ವಿತ ಪಟುಗಳು ಆಯ್ಕೆಯಾಗಿದ್ದಾರೆ.

ಬೆಳಗಾವಿಯಲ್ಲಿ ನಡೆದ 20ನೇ ಜಿಲ್ಲಾ ಸ್ಕೇಟಿಂಗ್ ಸ್ಪರ್ಧೆ ಮತ್ತು ಆಯ್ಕೆ ಟ್ರಯಲ್ಸ್‌ನಲ್ಲಿ 150ಕ್ಕೂ ಅಧಿಕ ಸ್ಕೇಟಿಂಗ್ ಪಟುಗಳು ಭಾಗವಹಿಸಿ, ಸ್ಪೀಡ್ ಸ್ಕೇಟಿಂಗ್, ಫ್ರೀ ಸ್ಟೈಲ್, ಆರ್ಟಿಸ್ಟಿಕ್, ಆಲ್ಪೈನ್-ಡೌನ್‌ಹಿಲ್ ಹಾಗೂ ರೋಲರ್ ಡರ್ಬಿಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಬಾಚಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ 55 ಪಟುಗಳು 42ನೇ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಸಮಾಜಸೇವಕ ಸಂತೋಷ ದರೇಕರ್ ಸ್ಪರ್ಧೆಗೆ ಚಾಲನೆ ನೀಡಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಸಂಘಟಕರು, ಪಟುಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Tags:

error: Content is protected !!