ಮತ ಹಾಕಿದವರೂ ಹಾಕದೇ ಇರುವವರು ಎಲ್ಲರೂ ನಮ್ಮವರೇ ಅಂದರೇ ಮಾತ್ರ ರಾಜಕಾರಣದಲ್ಲಿ ಇರುತ್ತೇವೆ, ಇಲ್ಲಾ ಮಾಜಿ ಆಗುತ್ತೇವೆ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.

ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ ಯೋಜನೆಯ ಅನುದಾನಡದಿಯಲ್ಲಿ 60 ಲಕ್ಷ ರೂ ದಲ್ಲಿ ನೂತನ ಪಂಚಾಯತ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.ಸ್ಥಳೀಯರಿಂದ ಸತ್ಕಾರ್ ಸ್ವೀಕರಿಸಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಇವರು ಮತ ಹಾಕುವದು ಪ್ರಜೆಗಳ ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಅವರ ಹಕ್ಕು, ಮತ ಹಾಕಿಲ್ಲಾ ಎಂದು ರಾಜಕಾರಣ ಮಾಡುವವರು ಶಾಸಕರಾಗಲಿಕ್ಕೆ ಲಾಯಕ್ಕಿಲ್ಲಾ, ಚಿಲ್ಲರೆ ರಾಜಕಾರಣ ಮಾಡಿದ್ದಾರೆ ಮಾಜಿ ಆಗುತಿದ್ದೆವು ಎಂದರು.

ಮತದಾನ ಮುಗಿದ ನಂತರ ಚುನಾವಣೆ ಅನ್ನೋದನ್ನ ಮರೆಯಬೇಕು.ನಮಗೆ ಮತ ಹಾಕಿದವರು ಹಾಕದೆ ಇರುವವರು ಎಲ್ಲರು ನಮ್ಮವೆರೆ, ಅದಕ್ಕಾಗಿ ನಾವು ಇಷ್ಟು ವರ್ಷ ರಾಜಕಾರಣದಲ್ಲಿ ಇದ್ದೇವೆ. ಒಂದೇ ಜಾತಿ ಮೇಲೆ ರಾಜಕಾರಣ ಮಾಡೋದಕ್ಕೆ ಆಗೋದಿಲ್ಲಾ ಎಂದರು.ಮತಗಳನ್ನು ಪ್ರೀತಿ, ವಿಶ್ವಾಸದಿಂದ ಪಡೆಯಬೇಕು ಹೊರತು ಹೆದರಿಸಿ, ಬೆದರಿಸಿ ಪಡೆಯೋಕೆ ಆಗೋದಿಲ್ಲಾ.ನಾನು ಇದೆ ಬಾರಿ ರಾಜಕೀಯದಿಂದ ಹೊರ ಬರಬೇಕೆಂದಿದ್ದೆ, ಜನರಿಗೆ ಹಲವಾರು ಕೆಲಸಗಳನ್ನು ಮಾಡುತ್ತೇನೆಂದು ಭರವಸೆ ನೀಡಿದ್ದೆ. ಈಗ ನಾವು ವಿರೋಧ ಪಕ್ಷದಲ್ಲಿ ಇದ್ದೇವೆ ಮುಂದೆ ನಮ್ಮ ಸರಕಾರ ಬಂದ ಮೇಲೆ ಎಲ್ಲಾ ಕೆಲಸ ಮಾಡುತ್ತೇನೆಂದರು.

ಇನ್ನು ಇದೆ ಹೊತ್ತಿನಲ್ಲಿ ಕತ್ತಿ ಕುಟುಂಬದವರದು ಏನಿಲ್ಲ ಅವರು ಮಾತಿನ ಮಲ್ಲರೂ ಅವರು ಕೆಲಸ ಮಾಡುವವರು ಅಲ್ಲಾ ಜಗ್ಗವರು ಮಾತ್ರ ಎಂದು ಕತ್ತಿ ವಿರುದ್ಧ ವ್ಯಂಗ ವಾಡಿದರು.
ನಂತರ ನಂದಗಾವ, ಮುತ್ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಿರಿಯ ಅಭಿಯಂತರ ಶಿವಲಿಂಗ, ಕ್ಷೇತ್ರ ಶಿಕ್ಷಣಧಿಕಾರಿ ಜಿ, ಬಿ, ಬಳಿಗಾರ,ಗುರುಪುತ್ರ ಕೋಟಬಾಗಿ, ಧರೆಪ್ಪಾ ಮಗದುಮ್, ಗಂಗರಾಯ ನಾಯಕ ಶಾನುಲ್ ಹತ್ತಿವಾಲೆ, ಸಂಜಯ ಮೇತ್ರಿ, ಮಹಾನಿಂಗ ಅಪ್ಪೋಜಪ್ಪಗೋಳ,ಮತ್ತು ಸಾವಳಗಿ, ಖಾನಾಪುರ, ನಂದಗಾವ, ಮೂತ್ನಾಳ ಗ್ರಾಮದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.
