ಕೇಂದ್ರ ಸರಕಾರದ ಲೋಕಸಭಾ ಹಾಗೂ ವಿಧಾನಸಭೆ ಮತಕ್ಷೇತ್ರಗಳ ಮರುವಿಂಗಡನೆ ಬಿಲ್ ಜಾರಿಗೆ ತರುವುದನ್ನ ವಿಜಯಪುರ ದಲ್ಲಿ ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ್ ಸ್ವಾಗತಿಸಿದರು.ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ನಿರ್ಧಾರವನ್ನ ಸ್ವಾಗತ ಮಾಡ್ತೆನೆ.
ಲೋಕಸಭಾ ಇದೀಗ ಬಹುದೊಡ್ಡ ದಾಗಿವೆ.ಜನಸಂಖ್ಯೆ ಆಧಾರದ ಮೇಲೆ ಕಡಿಮೆ ಆಗಲಿ,ಹೆಚ್ಚಾಗಲಿ ಎಂದರು.ಇನ್ನು ಮಹಿಳಾ ಮೀಸಲಾತಿ ಕೊಡಬೇಕಾಗಿದೆ,ಡಿ ಲಿಮ್ಟೇಷನ್ ಕೂಡ ಆಗಬೇಕು,ಎಸ್ ಸಿ ,ಎಸ್ ಟಿ ಸೀಟ್ ಗಳನ್ನು ಹೆಚ್ಚಿಸಬೇಕು. ಅವರರವ ಜನಸಂಖ್ಯೆ ಆಧಾರದ ಮೇಲೆ ಹೆಚ್ಚಾಗಬೇಕು,ಇದರಿಂದ ಎಲ್ಲರಿಗೂ ನ್ಯಾಯ ಸಿಗುತ್ತೆ ಎಂದರು.
ಮರುವಿಂಗಡನೆ ಆಗಬೇಕು, ಅದರಿಂದ ಅನೂಕೂಲ ಆಗುತ್ತೆ.
ಇದರಿಂದ ಜನಪ್ರತಿನಿಧಿಗೆ ನೇರವಾಗಿ ಜನರೊಂದಿಗೆ ಕೆಲಸ ಮಡಲು ಅನುಕೂಲ ಆಗುತ್ತೆ ಎಂದರು.ಇನ್ನು ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ
ನಾನು ಸದ್ಯ ಎಂಎಲ್ ಎ ಇದ್ದೇನೆ.
ಮುಂದೆ ಮರುವಿಂಗಡೆನೆ ಆದ್ರೂ ಕೂಡ ವಿಜಯಪುರ ನಗರ ಮತಕ್ಷೇತ್ರ ಇದ್ದೇ ಇರುತ್ತೆ.ಎಂಪಿ ಆಗಿ ಅಲ್ಲಿ ಏನು ಕೆಲಸ ಇಲ್ಲ.ನಾನು ಎಂಪಿ ಆಗಿ ೧೦ ವರ್ಷ ನೋಡಿದ್ದೇನೆ.ಸುಮ್ನೆ ಅಲ್ಲಿಗೆ ಹೋಗೋದು ಕೈ ಎತ್ತುವುದು ಡಬ್ಬ ಡಬ್ಬ ಬಡಿಯುವುದು ಬರೋದು ಎಂದರು.
ಬೈಟ್ : ಬಸನಗೌಡಾ ಪಾಟೀಲ್ ಯತ್ನಾಳ್ ( ಶಾಸಕ )
**************[2]
ದೆಹಲಿ ಚಲೋ ಮಾಡಲಿ, ಕೇಂದ್ರ ಸರಕಾರ ಕೂಡ ಸ್ವಲ್ಪ ಗಂಭೀರವಾಗಿ ತಗೆದುಕೊಳ್ಳಲಿ.ಈಗ ರಾಜ್ಯದಲ್ಲಿ ಕಾಂಗ್ರೆಸ್ ಇದೆನೋ, ಬಿಜೆಪಿ ಇದೆನೋ, ಜೆಡಿಎಸ್ ಇದೆನೋ ಮಹತ್ವ ಅಲ್ಲ.ರಾಜ್ಯದ ಜನರ ಹಿತ ನೋಡಬೇಕು ಎಂದು ಕೇಂದ್ರದಿಂದ ಬರ ಪರಿಹಾರ ಬರದಿದ್ದರೆ ಕಾಂಗ್ರೆಸ್ ನಿಂದ ದೆಹಲಿ ಚಲೋ ಚಳವಳಿ ವಿಚಾರಕ್ಕೆ ವಿಜಯಪುರದಲ್ಲಿ ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ್ ಈ ರೀತಿ ಪ್ರತಿಕ್ರಿಯಿಸಿದರು.
ಇನ್ನುಬಿಜೆಪಿಗೂ ನಮ್ಮಿ ಜನ ಎಂಪಿ ಆರಿಸಿ ಕಳಿಸಿದ್ದಾರೆ.ರಾಜ್ಯ ವಿಧಾನಸಭೆಯಲ್ಲಿ ಬೇರೆ ಪಕ್ಷ ಅರಿಸಿರಬಹುದು.ಆದ್ರೆ ದೇಶದ ವಿಷಯ ಬಂದಾಗ ನರೇಂದ್ರ ಮೋದಿಯವರನ್ನ ನೋಡಿ ಬಿಜೆಪಿ ಯವರನ್ನ ಆರಿಸಿ ನಮ್ಮವರು ಕಳಿಸಿದ್ದಾರೆ.ನಮ್ಮವರಂತು ಬಾಯಿ ಬಿಡಲ್ಲ ಗೊತ್ತಿದೆ,ಬೇರೆ ಬೇರೆ ಕೆಟ್ಟ ಕೆಲಸಕ್ಕೆಲ್ಲ ಬಾಯಿ ಬಿಡ್ತಾರೆ. ನಮ್ಮವರಾದ ಪ್ರಲ್ಹಾದ ಜೋಶಿ,ವಿ ಸೋಮಣ್ಣ,ಶೋಭಾ ಕರಂದ್ಲಾಜೆ, ಎಚ್ಡಿಕೆ ನಾಲ್ವರು ಸೇರಿ ಬಿಜೆಪಿ ನಿಯೋಗ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.ಇನ್ನು ಈ ಹಿಂದೆ ನಾವು ನಿಯೋಗ ಕೊಂಡೊಯ್ದು ವಾಜಪೇಯಿ ಅವರನ್ನ ಭೇಟಿ ಮಾಡ್ತಿದ್ವಿ.ಹಾಗೆ ಪ್ರಲ್ಹಾದ ಜೋಶಿ, ಸೋಮಣ್ಣ, ಶೋಭಾ ಕರಂದ್ಲಾಜೆ,ಎಚ್ಡಿಕೆ ಅವರು ನೇತೃತ್ವವಹಿಸಬೇಕು.ಡೆಕೆಶಿ ಅವರ ತಂಡ ಹೋಗುವ ಮುನ್ನ ಹಣ ಬಿಡುಗಡೆ ಆದ್ರೆ ಬಿಜೆಪಿ ಅವರಿಗೆ ಗೌರವ ಬರುತ್ತೆ ಎಂದರು.
ಬೈಟ್ : ಬಸನಗೌಡಾ ಪಾಟೀಲ್ ಯತ್ನಾಳ್
