Vijaypura

ಬಸವಣ್ಣನವರ ಕುರಿತು ಅವಹೇಳನಕಾರಿ ಕೃತಿ ಮುಟ್ಟುಗೋಲು ಸ್ವಾಗತಾರ್ಹ; ರವಿ ಹಂಜ್ ಹಾಗೂ ಪ್ರಚೋದಕರ ಬಂಧನಕ್ಕೆ ಎಂ.ಜಿ. ಆದಿಗೊಂಡ ಆಗ್ರಹ

Share

ಬಸವಣ್ಣನವರು ಬಿಜ್ಜಳನ ಖಜಾನೆ ಲೂಟಿ ಮಾಡಿದ್ದಾರೆ, ಬಿಜ್ಜಳನನ್ನು ಕೊಲೆ ಮಾಡಿದ್ದಾರೆ ಹಾಗೂ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನದ ಆಶಯವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಆಧಾರ ರಹಿತವಾಗಿದ್ದು, ಇಂತಹ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ ಎಂದು ಎಂ.ಜಿ. ಆದಿಗೊಂಡ ಹೇಳಿದರು.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಶರಣ ಎಂ.ಎಂ. ಕಲಬುರ್ಗಿ ಸೇರಿದಂತೆ ಶರಣ ಪರಂಪರೆಯ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಪ್ರವೃತ್ತಿ ಖಂಡನೀಯವಾಗಿದೆ. ಬಸವಣ್ಣನವರ ಚರಿತ್ರೆ ಹಾಗೂ ವಚನ ಪರಂಪರೆಯ ಬಗ್ಗೆ ತಪ್ಪು ಮಾಹಿತಿ ಹರಡುವ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಪಟ್ಟಣದ ವಿರಕ್ತಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣ ಎಂ.ಎಂ. ಕಲಬುರ್ಗಿ ಸೇರಿದಂತೆ ಶರಣ ಪರಂಪರೆಯ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಪ್ರವೃತ್ತಿ ಖಂಡನೀಯವಾಗಿದೆ. ಬಸವಣ್ಣನವರ ಚರಿತ್ರೆ ಹಾಗೂ ವಚನ ಪರಂಪರೆಯ ಬಗ್ಗೆ ತಪ್ಪು ಮಾಹಿತಿ ಹರಡುವ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ವೈದಿಕ ಪರಂಪರೆಗೆ ಮರುಹುಟ್ಟು ನೀಡಬೇಕೆಂದು ಬಯಸುವ ಕೆಲವರಿಗೆ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಪಪ್ರಚಾರಕ್ಕೆ ಪ್ರಚೋದನೆ ನೀಡಲಾಗುತ್ತಿದೆಯೇ ಎಂಬ ಬಗ್ಗೆಯೂ ತನಿಖೆಯಾಗಬೇಕು. ರವಿ ಹಂಜ್ ಅವರನ್ನು ಬಂಧಿಸು ವುದಷ್ಟೇ ಅಲ್ಲದೆ, ಅವರಿಗೆ ಬೆನ್ನೆಲುಬಾಗಿ ನಿಂತು ಪ್ರಚೋದಿಸುತ್ತಿರುವ ಕೆಲವು ಮಠಾಧೀಶರು ಸೇರಿದಂತೆ ಸಂಬಂಧಪಟ್ಟ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿ ಯಲ್ಲಿ ವಿವೇಕಾನಂದ ಕಲ್ಯಾಣಶೆಟ್ಟಿ, ಎಫ್.ಡಿ. ಮೇಟಿ, ಎಸ್.ಎಸ್. ಝಳಕಿ, ಬಸವರಾಜ ಗೋಳಸಂಗಿ, ಸಂಗಮೇಶ ಓಲೆಕಾರ್, ಚಂದ್ರಶೇಖರ ಪಾಟೀಲ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!