State

ಅಧುನಿಕ ಭಾರತಕ್ಕೆ ನೆಹರೂ ದೂರದೃಷ್ಟಿ ಸ್ಮರಿಸಿದ ಸಿಎಂ ಡಿ.ಕೆ. ಶಿವಕುಮಾರ್

Share

ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನ ಹಾಗೂ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಆಧುನಿಕ ಭಾರತ ನಿರ್ಮಾಣಕ್ಕೆ ನೆಹರೂ ನೀಡಿದ ಐತಿಹಾಸಿಕ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ, ಬೆಂಗಳೂರು ಮೂಲಸೌಕರ್ಯ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರಗಳಲ್ಲಿ ಸರ್ಕಾರದ ಸ್ಪಷ್ಟ ನಿಲುವನ್ನು ಪ್ರಕಟಿಸಿದ್ದಾರೆ.

ಸ್ವಾತಂತ್ರ್ಯದ ನಂತರ ದೇಶದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿಕೊಟ್ಟ ಪಂಡಿತ್ ನೆಹರೂ ಅವರ ದೂರದೃಷ್ಟಿಯನ್ನು ಡಿ.ಕೆ. ಶಿವಕುಮಾರ್ ಕೊಂಡಾಡಿದ್ದಾರೆ. ಎಚ್.ಎ.ಎಲ್, ಬಿ.ಎಚ್.ಇ.ಎಲ್, ಐ.ಟಿ.ಐ ನಂತಹ ಸಾರ್ವಜನಿಕ ವಲಯದ ಬೃಹತ್ ಕೈಗಾರಿಕೆಗಳು ಹಾಗೂ ಏಮ್ಸ್, ಐಐಎಂ ನಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ನೆಹರೂ ದೇಶವನ್ನು ಮುನ್ನಡೆಸಿದರು. 550ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವ ಬಲಪಡಿಸುವುದರ ಜೊತೆಗೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಗೆ ಬೆನ್ನೆಲುಬಾಗಿ ನಿಂತರು. 50ರ ದಶಕದಲ್ಲೇ ಪಂಚವಾರ್ಷಿಕ ಯೋಜನೆ ಮತ್ತು ಕಂಪ್ಯೂಟರ್ ಯುಗದ ಕನಸು ಕಂಡಿದ್ದ ನೆಹರೂ, ಮಹಿಳಾ ರಕ್ಷಣೆಗಾಗಿ ವರದಕ್ಷಿಣೆ ವಿರೋಧಿ ಕಾನೂನು ಹಾಗೂ ಕರ್ನಾಟಕದ ತುಂಗಭದ್ರಾ ಅಣೆಕಟ್ಟು ಸೇರಿದಂತೆ ಹಲವು ಜಲವಿದ್ಯುತ್ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ ರಾಜ್ಯದ ಪ್ರಮುಖ ಯೋಜನೆಗಳ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ರಾಜಕಾರಣದಲ್ಲಿ ಸ್ಪರ್ಧೆ ಇರಲಿ, ಆದರೆ ಅಭಿವೃದ್ಧಿಯಲ್ಲಿ ಸಹಕಾರವಿರಲಿ” ಎಂಬ ನೀತಿಯೊಂದಿಗೆ ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದಾಗಿ ಸ್ಪಷ್ಟಪಡಿಸಿದರು. ಮೇಕೆದಾಟು ಯೋಜನೆಗೆ ತಮಿಳುನಾಡಿನ ವಿರೋಧ ಏನೇ ಇದ್ದರೂ ಕಾನೂನು ಪ್ರಕಾರ ನಮ್ಮ ರಾಜ್ಯದ ಪಾಲಿನ ಹಕ್ಕನ್ನು ಪಡೆದೇ ತೀರುತ್ತೇವೆ; ತಮಿಳುನಾಡು ನಿಯೋಗ ಬಂದರೆ ಎರಡೂ ರಾಜ್ಯಗಳಿಗೆ ಆಗುವ ಲಾಭವನ್ನು ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು. ಅಲ್ಲದೆ, ಬೆಂಗಳೂರು ಮೆಟ್ರೋ ಪಿಂಕ್ ಲೈನ್, ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣದ ಅಡೆತಡೆ ನಿವಾರಣೆಗೆ ಕೇಂದ್ರದೊಂದಿಗೆ ಚರ್ಚಿಸಲು ಸಿದ್ಧವಿರುವುದಾಗಿ ಹೇಳಿದ ಅವರು, ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ನಿಲುವು ಹಾಗೂ ರೈತರ ಪಂಪ್‌ಸೆಟ್ ಮತ್ತು ಕೆರೆ ತುಂಬಿಸುವ ವಿದ್ಯುತ್ ಬಿಲ್ ಬಾಕಿ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸುವ ಭರವಸೆ ನೀಡಿದರು.

Tags:

error: Content is protected !!