Belagavi

ರಕ್ತದಾನ ಶ್ರೇಷ್ಠದಾನಗಳಲ್ಲಿ ಒಂದು : ಕರ್ನಲ್ ಸುನೀಲ ದಾಗರ

Share

ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದು. ಪ್ರತಿಯೊಬ್ಬ ವ್ಯಕ್ತಿಯು ವರ್ಷದಲ್ಲಿ ಒಂದರಿAದ ಮೂರು ಸಲ ರಕ್ತದಾನ ಮಾಡಬೇಕು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಸಾಮಾಜಿಕ ಸೇವೆಗಳಲ್ಲಿ ರಕ್ತದಾನವು ಮಹತ್ವದ್ದಾಗಿದೆ ಎಂದು 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಂಡಿAಗ್ ಆಫೀಸರ್ ಕರ್ನಲ್ ಸುನೀಲ ದಾಗರ ಹೇಳಿದರು.

ಅವರು ಲಿಂಗರಾಜ ಕಾಲೇಜಿನಲ್ಲಿ ಎನ್‌ಸಿಸಿ, ರೆಡ್ ಕ್ರಾಸ್, ಎನ್ಎ

ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದು. ಪ್ರತಿಯೊಬ್ಬ ವ್ಯಕ್ತಿಯು ವರ್ಷದಲ್ಲಿ ಒಂದರಿAದ ಮೂರು ಸಲ ರಕ್ತದಾನ ಮಾಡಬೇಕು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಸಾಮಾಜಿಕ ಸೇವೆಗಳಲ್ಲಿ ರಕ್ತದಾನವು ಮಹತ್ವದ್ದಾಗಿದೆ ಎಂದು 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಂಡಿAಗ್ ಆಫೀಸರ್ ಕರ್ನಲ್ ಸುನೀಲ ದಾಗರ ಹೇಳಿದರು.

ಅವರು ಲಿಂಗರಾಜ ಕಾಲೇಜಿನಲ್ಲಿ ಎನ್‌ಸಿಸಿ, ರೆಡ್ ಕ್ರಾಸ್, ಎನ್ಎಸ್ಎಸ್ ಘಟಕಗಳು ಹಾಗೂ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಕ್ತ ಭಂಡಾರ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಜನಾಂಗದಲ್ಲಿ ರಕ್ತದಾನದ ಪ್ರಜ್ಞೆಯನ್ನು ಮೂಡಿಸುವುದು ಅಗತ್ಯವಾಗಿದೆ. ನಾವು ರಕ್ತದಾನವನ್ನು ಮಾಡುವುದರಿಂದ ಒಬ್ಬ ರೋಗಿಯ ಜೀವವನ್ನು ಉಳಿಸಲು ಸಾಧ್ಯ. ಸ್ವಯಂ ಇಚ್ಛಿಯಿಂದ ಮುಂದೆ ಬಂದು ರಕ್ತದಾನವನ್ನು ಮಾಡುವಂತಾಗಬೇಕು. ಇದೊಂದು ಪ್ರತಿಯೊಬ್ಬ ನಾಗರಿಕ ಕರ್ತವ್ಯವಾಗಿದೆ ಎಂದರು.

ಲಿAಗರಾಜ ಪ್ರಾಚಾರ್ಯೆ ಡಾ.ಎಚ್.ಎಸ್.ಮೇಲಿನಮನಿ ಅವರು ಮಾತನಾಡಿ ‘ಎನ್ಸಿಸಿ ಕೆಡೆಟ್ಗಳಲ್ಲಿ ರಕ್ತದಾನದ ಮಹತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಕ್ತದಾನವನ್ನು ಆಯೋಜಿಸಲಾಗಿದೆ. ಯುವಕರು ನಮ್ಮ ದೇಶದ ಬೆನ್ನೆಲುಬು. ಅವರು ಸಾಮಾಜಿಕ ಸೇವೆಗಳಲ್ಲಿ ಪಾಲ್ಗೊಳ್ಳಬೇಕು. 1948ರಲ್ಲಿ ಸ್ಥಾಪನೆಗೊಂಡ ದೇಶದ ದೊಡ್ಡ ಸಂಘಟನೆ ಎನ್‌ಸಿಸಿ. ಯುವಕ ಯುವತಿಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಅವರ ನೈತಿಕ ಬಲವನ್ನು ಹೆಚ್ಚಿಸುತ್ತಿದೆ. ಕೆಡೆಟ್ಗಳಿಗೆ ಸೈನಿಕ ತರಬೇತಿಯನ್ನು ನೀಡುವ ಮೂಲಕ ದೇಶಾಭಿಮಾನವನ್ನು ಮೂಡಿಸುವ ಮಹತ್ರ ಕೆಲಸ ಮಾಡುತ್ತಿದೆ. ಎನ್ಸಿಸಿ ದಿನಾಚರಣೆಯನ್ನು ರಕ್ತದಾನ ಶಿಬಿರದ ಮೂಲಕ ಅರ್ಥಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಕೆಎಲ್ಇ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ್ ಡಾ.ವಿಠ್ಠಲ ಮಾನೆ, ಡಾ. ಗಂಗಾಧರ ಭಗವತನವರ, ಎನ್‌ಸಿಸಿ ಅಧಿಕಾರಿಗಳಾದ ಮೇಜರ್ ಡಾ.ಮಹೇಶ ಗುರನಗೌಡರ, ಕ್ಯಾಫ್ಟನ್ ಡಾ.ಶಿವಾನಂದ ಬುಲಬುಲೆ, ಎಚ್.ಎನ್.ಬನ್ನೂರ, ಎನ್ಎಸ್ಎಸ್ ಘಟಕದ ಪ್ರಶಾಂತ ಕೊಣ್ಣೂರ, ಶಶಿಕಾಂತ ತಾರದಾಳೆ ಉಪಸ್ಥಿತರಿದ್ದರು.

ಸ್ಎಸ್ ಘಟಕಗಳು ಹಾಗೂ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಕ್ತ ಭಂಡಾರ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಜನಾಂಗದಲ್ಲಿ ರಕ್ತದಾನದ ಪ್ರಜ್ಞೆಯನ್ನು ಮೂಡಿಸುವುದು ಅಗತ್ಯವಾಗಿದೆ. ನಾವು ರಕ್ತದಾನವನ್ನು ಮಾಡುವುದರಿಂದ ಒಬ್ಬ ರೋಗಿಯ ಜೀವವನ್ನು ಉಳಿಸಲು ಸಾಧ್ಯ. ಸ್ವಯಂ ಇಚ್ಛಿಯಿಂದ ಮುಂದೆ ಬಂದು ರಕ್ತದಾನವನ್ನು ಮಾಡುವಂತಾಗಬೇಕು. ಇದೊಂದು ಪ್ರತಿಯೊಬ್ಬ ನಾಗರಿಕ ಕರ್ತವ್ಯವಾಗಿದೆ ಎಂದರು.

ಲಿAಗರಾಜ ಪ್ರಾಚಾರ್ಯೆ ಡಾ.ಎಚ್.ಎಸ್.ಮೇಲಿನಮನಿ ಅವರು ಮಾತನಾಡಿ ‘ಎನ್ಸಿಸಿ ಕೆಡೆಟ್ಗಳಲ್ಲಿ ರಕ್ತದಾನದ ಮಹತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಕ್ತದಾನವನ್ನು ಆಯೋಜಿಸಲಾಗಿದೆ. ಯುವಕರು ನಮ್ಮ ದೇಶದ ಬೆನ್ನೆಲುಬು. ಅವರು ಸಾಮಾಜಿಕ ಸೇವೆಗಳಲ್ಲಿ ಪಾಲ್ಗೊಳ್ಳಬೇಕು. 1948ರಲ್ಲಿ ಸ್ಥಾಪನೆಗೊಂಡ ದೇಶದ ದೊಡ್ಡ ಸಂಘಟನೆ ಎನ್‌ಸಿಸಿ. ಯುವಕ ಯುವತಿಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಅವರ ನೈತಿಕ ಬಲವನ್ನು ಹೆಚ್ಚಿಸುತ್ತಿದೆ. ಕೆಡೆಟ್ಗಳಿಗೆ ಸೈನಿಕ ತರಬೇತಿಯನ್ನು ನೀಡುವ ಮೂಲಕ ದೇಶಾಭಿಮಾನವನ್ನು ಮೂಡಿಸುವ ಮಹತ್ರ ಕೆಲಸ ಮಾಡುತ್ತಿದೆ. ಎನ್ಸಿಸಿ ದಿನಾಚರಣೆಯನ್ನು ರಕ್ತದಾನ ಶಿಬಿರದ ಮೂಲಕ ಅರ್ಥಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಕೆಎಲ್ಇ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ್ ಡಾ.ವಿಠ್ಠಲ ಮಾನೆ, ಡಾ. ಗಂಗಾಧರ ಭಗವತನವರ, ಎನ್‌ಸಿಸಿ ಅಧಿಕಾರಿಗಳಾದ ಮೇಜರ್ ಡಾ.ಮಹೇಶ ಗುರನಗೌಡರ, ಕ್ಯಾಫ್ಟನ್ ಡಾ.ಶಿವಾನಂದ ಬುಲಬುಲೆ, ಎಚ್.ಎನ್.ಬನ್ನೂರ, ಎನ್ಎಸ್ಎಸ್ ಘಟಕದ ಪ್ರಶಾಂತ ಕೊಣ್ಣೂರ, ಶಶಿಕಾಂತ ತಾರದಾಳೆ ಉಪಸ್ಥಿತರಿದ್ದರು.

Tags:

error: Content is protected !!