ಬೆಳಗಾವಿಯಲ್ಲಿ ಮಾದಕ ವಸ್ತು ಸೇವನೆ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ನಾಲ್ವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದ್ದು, ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನವೆಂಬರ್ 26, 2026ರಂದು ಬೆಳಗಾವಿಯ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ನಾಲ್ವರನ್ನು ಪತ್ತೆಹಚ್ಚಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಅವರು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಛತ್ರಪತಿ ಶಿವಾಜಿ ನಗರದ 1ನೇ ಕ್ರಾಸ್ ಬಳಿ ಅಭಿಜೀತ ಭರ್ಮಾ ಪಾಟೀಲ (23) ಹಾಗೂ 4ನೇ ಕ್ರಾಸ್ ಬಳಿ ಸಿದ್ದಾರ್ಥ ದತ್ತಾ ಕದಂ (24) ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕ್ರಮವಾಗಿ ಪ್ರಕರಣ ಸಂಖ್ಯೆ 267/2026 ಮತ್ತು 268/2026 ದಾಖಲಿಸಲಾಗಿದೆ. ಹಾಗೆಯೇ ಮಹಾಂತೇಶ ನಗರದ ಗ್ಲಾಸ್ ಹೌಸ್ ಬಳಿ ಮೊಹಮ್ಮದ್ ಅರ್ಸಲೇನ್ ಅನೀಸಹ್ಮದ ಬಾಗಲಕೋಟೆ (19) ಹಾಗೂ ಅಶೋಕ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಫ್ರಾನ್ @ ಅಶ್ವಾಕ್ ಅನ್ಸರ ತೆಂಗನಕೇರಿ (20) ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕ್ರಮವಾಗಿ ಪ್ರಕರಣ ಸಂಖ್ಯೆ 258/2026 ಮತ್ತು 259/2026 ದಾಖಲಿಸಲಾಗಿದೆ. ಎಲ್ಲಾ ನಾಲ್ಕು ಆರೋಪಿಗಳ ವಿರುದ್ಧ ಎನ್ಡಿಪಿಎಸ್ (NDPS) ಕಾಯ್ದೆಯ ಕಲಂ 27(ಬಿ) ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ
