goa

ಎಐಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ವೈಶಾಲಿ ಸುತಾರ್ ನೇಮಕ: ಗೋವಾ ರಾಜ್ಯದ ಉಸ್ತುವಾರಿ ಹೊಣೆ!

Share

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಹಿಂದುಳಿದ ವರ್ಗಗಳ ಮಹಿಳಾ ವಿಭಾಗದಲ್ಲಿ ಪ್ರಮುಖ ರಾಜಕೀಯ ಬದಲಾವಣೆಯಾಗಿದೆ. ಈ ಮಹತ್ವದ ಹುದ್ದೆಗೆ ಭಾಜನರಾಗಿರುವ ವೈಶಾಲಿ ಸುತಾರ್ ಅವರಿಗೆ ಪಕ್ಷವು ಇದೀಗ ಗೋವಾ ರಾಜ್ಯದ ಪ್ರಭಾರಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿಕೊಟ್ಟಿದೆ.
ಎಐಸಿಸಿ ಹಿಂದುಳಿದ ವರ್ಗಗಳ (OBC) ಮಹಿಳಾ ವಿಭಾಗದ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ವೈಶಾಲಿ ಸುತಾರ್ ಅವರಿಗೆ ಎಐಸಿಸಿ ವರಿಷ್ಠರು ಇದೀಗ ಗೋವಾ ರಾಜ್ಯದ ಉಸ್ತುವಾರಿ ಹೊಣೆಗಾರಿಕೆಯನ್ನು ನೀಡಿದ್ದಾರೆ. ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಪಕ್ಷದ ತಳಮಟ್ಟದ ಬಲವರ್ಧನೆಗೆ ನಿರಂತರವಾಗಿ ಶ್ರಮಿಸುತ್ತಿರುವ ಅವರ ಪಕ್ಷಸೇವೆಯನ್ನು ಗುರುತಿಸಿ ಈ ಉನ್ನತ ಹುದ್ದೆಯನ್ನು ಹಸ್ತಾಂತರಿಸಲಾಗಿದೆ. ಗೋವಾದಲ್ಲಿ ಹಿಂದುಳಿದ ವರ್ಗಗಳ ಹಾಗೂ ಮಹಿಳೆಯರ ಧ್ವನಿಯಾಗಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸವನ್ನು ಕಾಂಗ್ರೆಸ್ ನಾಯಕತ್ವ ವ್ಯಕ್ತಪಡಿಸಿದ್ದು, ಈ ಹೊಸ ಜವಾಬ್ದಾರಿ ವಹಿಸಿಕೊಂಡ ನಾಯಕಿ ವೈಶಾಲಿ ಸುತಾರ್ ಅವರಿಗೆ ವಿವಿಧ ಸ್ತರದ ಮುಖಂಡರು ಹಾಗೂ ಕಾರ್ಯಕರ್ತರಿಂದ ಹಾರ್ದಿಕ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Tags:

error: Content is protected !!