ಖಾನಾಪೂರ ತಾಲೂಕಿನ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಸದ್ಯಕ್ಕೆ ಎಐಸಿಸಿ ಯಿಂದ ಗೋವಾ ಸೇರಿದಂತೆ ಇನ್ನಿತರ ಕೆಲವು ಕಡೆಗಳಲ್ಲಿ ಉಸ್ತುವಾರಿ ಜವಾಬ್ದಾರಿ ಹೊತ್ತು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಕ್ರೀಯವಾಗಿ ಸಂಘಟಿಸುವ ಜವಾಬ್ದಾರಿಯಲ್ಲಿದ್ದು ಗೋವಾ ಕಾಂಗ್ರೆಸ್ ಕುಟುಂಬದೊಂದಿಗೆ ಅವರು 80ನೇ ಸ್ವಾಂತಂತ್ರ್ಯ ದಿನಾಚರಣೆಯನ್ನು ಆಚರಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಂತಿಯುತ ರಾಜ್ಯವಾದ ಗೋವಾವನ್ನು ವಿಭಜಿಸುವ ಯತ್ನಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಡೋಣ ಎಂದು ಹೇಳಿ ಎಲ್ಲರಿಗೂ 80ನೇ ಸ್ವಾಂತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
