ರಾಜ್ಯದ ಐತಿಹಾಸಿಕ ಪರಂಪರೆ ಮತ್ತು ಪ್ರಾಕೃತಿಕ ಸೌಂದರ್ಯವನ್ನುಈ ರೈಲು ಪರಿಚಯಿಸಲಿದೆ. ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲಿನ ಹೊಸ ಋತುವಿನ ಸಂಚಾರಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದರು.ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ2026-27ನೇ ಸಾಲಿನ ಐಷಾರಾಮಿ ಪ್ರವಾಸಿ ರೈಲಿನ ಹೊಸ ಋತುವಿಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿ ರೈಲಿನ ಮೊದಲ ಸಂಚಾರಕ್ಕೆ ಚಾಲನೆ ನೀಡಿದರು.

ರಾಜ್ಯದ ಐತಿಹಾಸಿಕ ಪರಂಪರೆ ಮತ್ತು ಪ್ರಾಕೃತಿಕ ಸೌಂದರ್ಯವನ್ನುಈ ರೈಲು ಪರಿಚಯಿಸಲಿದೆ. ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲಿನ ಹೊಸ ಋತುವಿನ ಸಂಚಾರಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಮತ್ತೊಂದು ಪ್ರವಾಸಿ ಋತು ಆರಂಭವಾಗಿದೆ ಎಂದು ಹೇಳಿದರು.

‘ಪ್ರೈಡ್ ಆಫ್ ಕರ್ನಾಟಕ’ದ ಮೊದಲ ಪ್ರವಾಸದ ಎಲ್ಲ ಆಸನಗಳು ಭರ್ತಿಯಾಗಿರುವುದು ಸಂತಸದ ಸಂಗತಿ. ನಮ್ಮ ರಾಜ್ಯದ ಭವ್ಯ ಐತಿಹಾಸಿಕ ಪರಂಪರೆ, ವನ್ಯಜೀವಿ ಸಂಪತ್ತು, ರಮಣೀಯ ಪ್ರಕೃತಿ ದೃಶ್ಯಗಳು ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಲು 75 ಪ್ರವಾಸಿಗರು ಸಜ್ಜಾಗಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಈ ಪ್ರವಾಸಿ ಋತುವಿನಲ್ಲಿ ಒಟ್ಟು 13 ಪ್ರವಾಸಗಳನ್ನು ಆಯೋಜಿಸಲು ಯೋಜಿಸಲಾಗಿದೆ. ಕರ್ನಾಟಕವನ್ನು ಐಷಾರಾಮಿ ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿ ರೂಪಿಸುವುದರ ಜೊತೆಗೆ ಪ್ರತಿಯೊಬ್ಬ ಪ್ರವಾಸಿಗರಿಗೂ ಜೀವನಪೂರ್ತಿ ನೆನಪಿನಲ್ಲಿ ಉಳಿಯುವಂತಹ ವಿಶಿಷ್ಟ ಅನುಭವಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.ನವೀಕೃತ ರೂಪದಲ್ಲಿ ಮಾರುಕಟ್ಟೆಗೆ ಬಂದಿರುವ ಈ ಐಷಾರಾಮಿ ರೈಲಿಗೆ ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಮೊದಲ ಪ್ರಯಾಣದ ಎಲ್ಲಾ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದು, ದೇಶದ ಪ್ರಮುಖ ಪ್ರವಾಸಿಗರ ಜೊತೆಗೆ ಸ್ಪೇನ್ ಸೇರಿದಂತೆ ವಿವಿಧ ದೇಶಗಳ ವಿದೇಶಿ ಅತಿಥಿಗಳು ಈ ಸುವರ್ಣ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಐಆರ್ಸಿಟಿಸಿ ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಜಂಟಿಯಾಗಿ ಈ ಐಷಾರಾಮಿ ರೈಲನ್ನು ನಿರ್ವಹಿಸುತ್ತಿವೆ.ಮೈಸೂರಿನ ರೈಲ್ವೆ ಕಾರ್ಯಾಗಾರದಲ್ಲಿ ತಾಂತ್ರಿಕ ನವೀಕರಣ ಹಾಗೂ ಹೊರಾಂಗಣದ ವಿನ್ಯಾಸವನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಹಿಂದೆ ಕೇವಲ ಮಲಗುವ ಕೋಣೆಗಳನ್ನು ಮಾತ್ರ ಹೊಂದಿದ್ದ ಕ್ಯಾಬಿನ್ಗಳನ್ನು ಈಗ ಪ್ರತ್ಯೇಕ ‘ಲಿವಿಂಗ್ ರೂಮ್’ ಮತ್ತು ‘ಬೆಡ್ ರೂಮ್’ ಒಳಗೊಂಡಂತೆ ಮರುವಿನ್ಯಾಸಗೊಳಿಸಲಾಗಿದೆ.

ದಕ್ಷಿಣ ಭಾರತದ ಮಹಾನ್ ರಾಜವಂಶಗಳಾದ ಹೊಯ್ಸಳ, ಚಾಲುಕ್ಯ ಹಾಗೂ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಥೀಮ್ ಆಧಾರಿಸಿ ಒಳಾಂಗಣವನ್ನು ಹೊಳೆಯುವ ಮರದ ಮೇಲ್ಮೈ ಮತ್ತು ಸುಂದರ ವಿನ್ಯಾಸದಿಂದ ಸಜ್ಜುಗೊಳಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ: ಕೇಂದ್ರಕ್ಕೆ ಸಿಎಂ ಡಿ ಕೆ ಶಿವಕುಮಾರ್ ಮನವಿಅಗತ್ಯವಿರುವ ಕಡೆಗಳಲ್ಲಿ ಸಚಿವಾಲಯವು ವಿಶೇಷ ವಿಮಾನಗಳ ಓಡಾಟಕ್ಕೆ ವ್ಯವಸ್ಥೆ ಮಾಡಬೇಕು. ಯಾತ್ರಿಕರು ಸುರಕ್ಷಿತವಾಗಿ ಹಿಂತಿರುಗುವವರೆಗೂ ಅವರಿಗೆ ಅಗತ್ಯವಿರುವ ಎಲ್ಲರೀತಿಯ ನೆರವನ್ನು ನೀಡಬೇಕು” ಎಂದು ಕೋರಿದ್ದಾರೆ.ಮಧ್ಯಪ್ರಾಚ್ಯ ದೇಶಗಳ ಭದ್ರತಾ ಬಿಕ್ಕಟ್ಟು ಹಾಗೂ ಅದರಿಂದ ಉಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ನಗರಗಳಲ್ಲಿ ಸಿಲುಕಿರುವ ಕರ್ನಾಟಕದ 600ಕ್ಕೂ ಅಧಿಕ ಉಮ್ರಾ ಯಾತ್ರಿಕರನ್ನು ಸುರಕ್ಷಿತವಾಗಿ ಶೀಘ್ರವೇ ರಾಜ್ಯಕ್ಕೆ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
