Protest

ಅನ್ನ ಕೊಡುವ ರೈತನ ವಿರುದ್ಧ ಮಾತನಾಡಿದರೆ ಕ್ಷಮೆಯಿಲ್ಲ: ಹತ್ತರಗಿಯಲ್ಲಿ ಸರ್ಕಾರಕ್ಕೆ ಶ್ರೀ ನಿಜಗುಣಾನಂದ ಸ್ವಾಮೀಜಿ ಖಡಕ್ ಎಚ್ಚರಿಕೆ!

Share

ಹತ್ತರಗಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರು ರೈತರ ಪರವಾಗಿ ಗರ್ಜಿಸಿದ್ದಾರೆ. ‘ರೈತರ ಅನ್ನ ತಿಂದು ಅವರ ವಿರುದ್ಧವೇ ಮಾತನಾಡುವವರು ರಾಜಕಾರಣಿಗಳ ಮನೆಯಲ್ಲಿ ಸಗಣಿ ತಿನ್ನಲು ಯೋಗ್ಯ’ ಎಂದು ಕಟುವಾಗಿ ವಾಗ್ದಾಳಿ ನಡೆಸಿದ ಅವರು, ರಾಜ್ಯದ ಮಠಾಧೀಶರುಗಳಿಗೂ ಬೆಂಬಲಕ್ಕೆ ನಿಲ್ಲುವಂತೆ ಕರೆ ನೀಡಿದ್ದಾರೆ.

ಹತ್ತರಗಿ ರೈತ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಶ್ರೀ ನಿಜಗುಣಾನಂದ ಸ್ವಾಮೀಜಿಗಳು ಸರ್ಕಾರ ಹಾಗೂ ರೈತ ವಿರೋಧಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. “ಪೆಟ್ರೋಲ್ ಬೆಲೆಯನ್ನು ಯಾವುದೇ ಸಮಿತಿಯ ಹಂಗಿಲ್ಲದೆ ರಾತ್ರೋರಾತ್ರಿ ಏರಿಸುವ ಸರ್ಕಾರಗಳು, ರೈತ ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡಲು ಮೀನಾಮೇಷ ಎಣಿಸುತ್ತಿವೆ” ಎಂದು ಕಿಡಿಕಾರಿದರು. ರಾಜ್ಯದ ಮಠಾಧೀಶರು ಮಠದಿಂದ ಹೊರಬಂದು ರೈತರ ಬೆನ್ನೆಲುಬಾಗಿ ನಿಲ್ಲಬೇಕೆಂದು ಕರೆ ನೀಡಿದ ಸ್ವಾಮೀಜಿ, ರೈತರ ಬೇಡಿಕೆ ಈಡೇರುವವರೆಗೆ ಯಾವುದೇ ಮುಲಾಜಿಲ್ಲದೇ ಶಾಂತಿಯುತ ಹೋರಾಟ ಮುಂದುವರಿಸಬೇಕು ಎಂದರು. ಅಲ್ಲದೆ, ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿಗಳು, ರೈಲ್ವೆ ನಿಲ್ದಾಣ ಮತ್ತು ವಿಮಾನ ಹಾರಾಟಗಳನ್ನು ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ಹೋರಾಟದ ಮುಂದಿನ ಉಗ್ರ ರೂಪರೇಷೆಯನ್ನು ನೀಡಿದರು.

Tags:

error: Content is protected !!