Belagavi

ಕರ್ನಾಟಕ ರಾಜ್ಯೋತ್ಸವ-2026: ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನ

Share

ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ 13 ಜನ ಮಾಧ್ಯಮ ಪ್ರತಿನಿಧಿಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ರಾಜ್ಯೋತ್ಸವ ದಿನದಂದು ಗೌರವಿಸಿ, ಸನ್ಮಾನಿಸಲು ನಿರ್ಧರಿಸಲಾಗಿದೆ.

ಸನ್ಮಾನಿತರ ವಿವರ:

ಮುದ್ರಣ ಮಾಧ್ಯಮ ವಿಭಾಗ:

ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾದ ಹೃಷಿಕೇಶ ಬಹದ್ದೂರ ದೇಸಾಯಿ, ಕನ್ನಡಪ್ರಭ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಬ್ರಹ್ಮಾನಂದ ಹಡಗಲಿ,, ಪ್ರಜಾವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಇಮಾಮಹುಸೇನ್ ಗೂಡುನವರ, ಲೋಕದರ್ಶನ ದಿನಪತ್ರಿಕೆಯ ಛಾಯಾಗ್ರಾಹಕರಾದ ವಿಶ್ವನಾಥ ದೇಸಾಯಿ,

ವಿದ್ಯುನ್ಮಾನ‌ ಮಾಧ್ಯಮ‌ ವಿಭಾಗ:

ಆರ್.ಕನ್ನಡ ಜಿಲ್ಲಾ ವರದಿಗಾರರಾದ ಮೈಲಾರಿ‌ ಪಟಾತ್, ಚಿಕ್ಕೋಡಿ‌ನ್ಯೂಸ್ 18 ವರದಿಗಾರರಾದ ಲೋಹಿತ್ ಶಿರೋಳ, ಸುವರ್ಣ ನ್ಯೂಸ್ ಕ್ಯಾಮರಾಮನ್ ಅಡಿವೆಪ್ಪ ಪಾಟೀಲ, ಟಿ.ವಿ.9 ಸಂಸ್ಥೆಯ ಕ್ಯಾಮರಾಮನ್ ಸದಾಶಿವ ಜಾಧವ.

ಜಿಲ್ಲಾ/ಪ್ರಾದೇಶಿಕ ದಿನಪತ್ರಿಕೆ ಸಂಪಾದಕರ ವಿಭಾಗ:

ಲೋಕದರ್ಶನ ದಿನಪತ್ರಿಕೆಯ ಸಂಪಾದಕರಾದ ಶರತಚಂದ್ರ ದೇಸಾಯಿ ಹಾಗೂ ಕನ್ನಡಮ್ಮ‌ ದಿನಪತ್ರಿಕೆಯ ಸಂಪಾದಕರಾದ ರಾಜಕುಮಾರ್ ಟೋಪಣ್ಣವರ

ತಾಲ್ಲೂಕು ವರದಿಗಾರರ ವಿಭಾಗ:

ವಿಜಯವಾಣಿ ದಿನಪತ್ರಿಕೆ ಅಥಣಿ ವರದಿಗಾರರಾದ ರಾಜು ಗಾಲಿ, ಕನ್ನಡಪ್ರಭ ದಿನಪತ್ರಿಕೆಯ ಯಮಕನಮರಡಿ ವರದಿಗಾರರಾದ ಕೆ.ಎಂ.ಕರ್ನಾಚಿ

ಪತ್ರಿಕಾ‌ ವಿತರಕರ‌ ವಿಭಾಗ

ಯಮಕನಮರಡಿಯ ಪತ್ರಿಕಾ ವಿತರಕರಾದ ಭೀಮಪ್ಪ ಕೋತೆಕರ.

ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ:

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಪತ್ರಕರ್ತರನ್ನು ಒಳಗೊಂಡ ಆಯ್ಕೆ ಸಮಿತಿಯು ಇತ್ತೀಚೆಗೆ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಸನ್ಮಾನಿತರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುತ್ತದೆ.

1 ನವೆಂಬರ 2026 ರಂದು ಮುಂಜಾನೆ 9.00 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಭಾಜನರಾದ ಮಾಧ್ಯಮ ಪ್ರತಿನಿಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಗಣ್ಯರುಗಳು ಸನ್ಮಾನಿಸಲಿದ್ದಾರೆ.

Tags:

error: Content is protected !!