Belagavi

ರೈತರ ಧರಣಿ ಎಫೆಕ್ಟ್ ; ಗಂಟೆಗಟ್ಟಲೆ ಭಾರಿ ಸಂಚಾರ ದಟ್ಟಣೆ!

Share

ಬೆಳಗಾವಿಯ ಪ್ರಮುಖ ರಾಣಿ ಚೆನ್ನಮ್ಮ ವೃತ್ತದಲ್ಲಿ ರೈತರು ಹಮ್ಮಿಕೊಂಡ ಬೃಹತ್ ಮಾನವ ಸರಪಳಿ ಪ್ರತಿಭಟನೆಯಿಂದಾಗಿ ನಗರದಲ್ಲಿ ತೀವ್ರ ಸಂಚಾರ ಅಸ್ತವ್ಯಸ್ತಗೊಂಡಿದೆ. ವೃತ್ತದ ನಾಲ್ಕೂ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ತುರ್ತು ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯ ಐತಿಹಾಸಿಕ ರಾಣಿ ಚೆನ್ನಮ್ಮ ವೃತ್ತದಲ್ಲಿ ರೈತರು ನಡೆಸುತ್ತಿರುವ ಮಾನವ ಸರಪಳಿ ಪ್ರತಿಭಟನೆಯ ಎಫೆಕ್ಟ್‌ನಿಂದಾಗಿ ಇಡೀ ನಗರವೇ ಸ್ತಬ್ಧಗೊಂಡಂತಾಗಿದೆ. ರಾಣಿ ಚೆನ್ನಮ್ಮ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕೂ ಪ್ರಮುಖ ಮಾರ್ಗಗಳಲ್ಲಿ ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತ ವಾಹನಗಳಿಂದ ಭಾರಿ ಸಂಚಾರ ದಟ್ಟಣೆ ನಿರ್ಮಾಣವಾಗಿದೆ. ರಸ್ತೆಗಳು ಪೂರ್ತಿಯಾಗಿ ಬಂದ್ ಆದ ಪರಿಣಾಮ, ದಾರಿ ಸಿಗದೆ ತುರ್ತು ಪರಿಸ್ಥಿತಿಯಲ್ಲಿದ್ದ ಎರಡು ಆಂಬ್ಯುಲೆನ್ಸ್‌ಗಳು ಹಾಗೂ ಒಂದು ಮುಕ್ತಿವಾಹನ (ಶವವಾಹನ) ರಸ್ತೆಯ ಮಧ್ಯದಲ್ಲೇ ಪರದಾಡುವ ಸನ್ನಿವೇಶ ಎದುರಾಯಿತು. ನೂರಾರು ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ.

Tags:

error: Content is protected !!